ಸೋಮವಾರ, ಜೂನ್ 14, 2021
26 °C

ಹಂಪ್‌ನಲ್ಲಿ ಹಾರಿದ ಬೈಕ್: ಕೆಳಗೆ ಬಿದ್ದು ಯೋಧನ ಪತ್ನಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮೊಬೈಲ್ ಫೋನ್‌ನ ವಿಡಿಯೊ ಕಾಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ಮಾಡುವಾಗ ರಸ್ತೆ ಹಂಪ್‌ನಲ್ಲಿ ಬೈಕ್ ಹಾರಿದ ಪರಿಣಾಮ ಹಿಂದೆ ಕುಳಿತಿದ್ದ ಸವಾರನ ಪತ್ನಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುನಗುಂದ ತಾಲ್ಲೂಕಿನ ಮೂಗನೂರಿನ ಭಾರತೀಯ ಸೇನೆಯ ಯೋಧ ಶೇಖರಯ್ಯ ಮಠಪತಿ ಅವರ ಪತ್ನಿ ಪುಷ್ಪಲತಾ (35) ಸಾವಿಗೀಡಾದ ಮಹಿಳೆ.

ಶೇಖರಯ್ಯ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ರಜೆಗೆ ಊರಿಗೆ ಬಂದಿದ್ದ ಅವರು, ಸೋಮವಾರ ಕಾಶ್ಮೀರಕ್ಕೆ ಹೊರಡಬೇಕಿತ್ತು.

ಹೀಗಾಗಿ ಮುಂಜಾನೆ ಪತ್ನಿಯನ್ನು ಆಕೆಯ ತವರು ಹಿರೆಮಳಗಾವಿಗೆ ಬಿಟ್ಟು ಬರಲು ಹೊರಟಾಗ ಈ ದುರ್ಘಟನೆ ನಡೆದಿದೆ.

ಶೇಖರಯ್ಯ ಪತ್ನಿಯೊಂದಿಗೆ ಬೈಕ್ ನಲ್ಲಿ ಹೊರಟಾಗ ಅಜ್ಜಿ ಮನೆಯಲ್ಲಿ ಇದ್ದ ಮಗ ವಿಡಿಯೊ ಕರೆ ಮಾಡಿದ್ದಾನೆ. ಅವನೊಂದಿಗೆ ಮಾತಾಡುತ್ತಲೇ ಬೈಕ್ ಚಲಾಯಿಸಿದ್ದಾರೆ. ಮೂಗನೂರಿನ ಹೊರ ವಲಯಕ್ಕೆ ಬಂದಾಗ ರಸ್ತೆಯ ಹಂಪ್ ಬಂದಾಗ ಬೈಕ್ ಹಾರಿದೆ. ಈ ವೇಳೆ ಹಿಂದೆ ಕುಳಿತಿದ್ದ ಪುಷ್ಪಲತಾ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಘಟನೆಯಿಂದ ಅಘಾತಗೊಂಡ ಯೋಧ ಪತ್ನಿಯನ್ನು ತಬ್ಬಿಕೊಂಡು ಅಳುತಿದ್ದ ದೃಶ್ಯ ಕಂಡುಬಂದಿತು. ಪುಷ್ಪಲತಾ ಸಂಬಂಧಿಕರ ಗೋಳು ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಅಮೀನಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು