ಬಾಗಲಕೋಟೆ: ‘ಚಾಲುಕ್ಯರ ಗತವೈಭವ ಸಾರುವ ಚಾಲುಕ್ಯ ಉತ್ಸವವನ್ನು ಜನವರಿ 19ರಿಂದ 21ವರೆಗೆ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಚಾಲುಕ್ಯ ಉತ್ಸವ–2025’ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜ.19ರಂದು ಬಾದಾಮಿ, 20ರಂದು ಪಟ್ಟದಕಲ್ಲು ಹಾಗೂ 21ರಂದು ಐಹೊಳೆಯಲ್ಲಿ ಉತ್ಸವ ನಡೆಯಲಿದೆ. ಸಮಯ ಕಡಿಮೆ ಇರುವುದರಿಂದ ಎಲ್ಲ ಸಿದ್ಧತೆಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಬೇಕು’ ಎಂದು ವಿವಿಧ ಸಮಿತಿಗಳಿಗೆ ಸೂಚನೆ ನೀಡಿದರು.

‘ಜ.12ರಂದು ಮಧ್ಯಾಹ್ನ 3 ಗಂಟೆಗೆ ಬಾದಾಮಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಿದ್ಧತೆ ಕುರಿತು ಸಭೆ ನಡೆಯಲಿದೆ. ಮೂರು ದಿನಗಳ ಉತ್ಸವದಲ್ಲಿ ಭಾಗವಹಿಸುವ ಕಲಾವಿದರ ಪಟ್ಟಿಯನ್ನು ಅಂತಿಮಗೊಳಿಸಿ, ಆಮಂತ್ರಣ ಪತ್ರಿಕೆ ಸಿದ್ಧಪಡಿಸಬೇಕು. ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಉತ್ಸವದ ವೇದಿಕೆ ತಯಾರಿಗೆ ಸಂಬಂಧಿಸಿದ ಅಧಿಕಾರಿಗಳು ಭರದ ಸಿದ್ಧತೆ ಕೈಗೊಳ್ಳಬೇಕು. ಇಂದಿನಿಂದಲೇ ಸ್ಮಾರಕಗಳ ಸುತ್ತ ಸ್ವಚ್ಛತೆ ಕೈಗೊಂಡು, ರಸ್ತೆಗಳಲ್ಲಿ ತಗ್ಗು, ಗುಂಡಿಗಳನ್ನು ಮುಚ್ಚಿಸಬೇಕು’ ಎಂದು ತಿಳಿಸಿದರು.

ಸ್ಥಬ್ಧಚಿತ್ರ ತಯಾರಿ ಅಂತಿಮಗೊಳಿಸಿ ಜಿಲ್ಲೆಯಲ್ಲಿ ಸಂಚರಿಸಲು ಕ್ರಮಕೈಗೊಳ್ಳಬೇಕು. ಉತ್ಸವದ ಮುನ್ನಾದಿನ ಗ್ರಾಮೀಣ ಕ್ರೀಡೆಗಳಾದ ಕುಸ್ತಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ
ಸಂಗಪ್ಪ ಜಿಲ್ಲಾಧಿಕಾರಿ

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ವಿವಿಧ ಸಮಿತಿಯ ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ಊಟ ವಸತಿ ವ್ಯವಸ್ಥೆ ಸಮರ್ಪಕವಾಗಿರಲಿ

‘ಪಟ್ಟದಕಲ್ಲು ಹಾಗೂ ಐಹೊಳೆ ಗ್ರಾಮದಲ್ಲಿ ಸ್ವಚ್ಛತೆ ಕೈಗೊಳ್ಳಲು ಗ್ರಾಮ ಪಂಚಾಯಿತಿ ಅಭಿವೃದ್ಧಿಗಳು ಕ್ರಮವಹಿಸಿ. ಉತ್ಸವ ನಡೆಯುವ ಮೂರೂ ಸ್ಥಳಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲಾವಿದರನ್ನು ವೇದಿಕೆಗೆ ಕರೆತರಲು ವಾಹನಗಳ ಸಿದ್ಧತೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕು. ವಾಸ್ತವ್ಯಕ್ಕೆ ಹೋಟೆಲ್ ಸಮುದಾಯ ಭವನ ವಸತಿ ನಿಲಯಗಳನ್ನು ಗುರುತಿಸಿ ಪಟ್ಟಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ ತಿಳಿಸಿದರು.