ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಧೋಳ ನಗರಸಭೆ: ಸುನಂದಾ ಅಧ್ಯಕ್ಷೆ, ಮಹಿಬೂಬ್ ಉಪಾಧ್ಯಕ್ಷ

Published : 26 ಆಗಸ್ಟ್ 2024, 15:59 IST
Last Updated : 26 ಆಗಸ್ಟ್ 2024, 15:59 IST
ಫಾಲೋ ಮಾಡಿ
Comments

ಮುಧೋಳ: ಮುಧೋಳ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಗರಸಭೆ ಸಭಾಭವನದಲ್ಲಿ ಜಮಖಂಡಿ ಉಪವಿಭಾಗಧಿಕಾರಿಗಳು ಶ್ವೇತಾ ಬೀಡಿಕರ ನೇತೃತ್ವದಲ್ಲಿ ಚುನಾವಣೆ ನಡೆಯಿತು.

ಕಾಂಗ್ರೆಸ್ ಪಕ್ಷದ ವಾರ್ಡ್ ನಂ 30 ಸದಸ್ಯೆ ಸುನಂದಾ ಹನಮಂತ ತೇಲಿ 17 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ವಾರ್ಡ್ ನಂ 3 ರ ಪಕ್ಷೇತರ ಸದಸ್ಯ ಮಹಿಬೂಬ್ ಮುಕ್ತುಮಸಾಬ್ ಬಾಗವಾನ್ 17 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನಾಮಪತ್ರ ಪರಿಶೀಲನೆ ಹಾಗೂ ಹಿಂಪಡೆಯಲು ಅವಕಾಶ ನೀಡಿ ನಂತರ ಕೈ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಭಾಗವಹಿಸಿದ್ದರು.

31 ಸದಸ್ಯರ ನಗರಸಭೆಯಲ್ಲಿ ಬಿಜೆಪಿ ಬೆಂಬಲಿತ 16 ಸದಸ್ಯರು ಹಾಗೂ ಸಂಸದರು ಸೇರಿ ಒಟ್ಟು 17 ಜನರು ಹಾಗೂ ಕಾಂಗ್ರೆಸ್ ಬೆಂಬಲಿತ 14 ಸದಸ್ಯರು ಹಾಗೂ ಶಾಸಕರು ಸೇರಿ ಒಟ್ಟು 15 ಸದಸ್ಯರು, ಓರ್ವ ಪಕ್ಷೇತರ ಸದಸ್ಯರು ಸೇರಿ 33 ಸದಸ್ಯರು ಇದ್ದರು.

ಅದಲು ಬದಲು: ಬಿಜೆಪಿಯಿಂದ ಆಯ್ಕೆಯಾದ ನಾಲ್ವರು ಸದಸ್ಯರಾದ ವಾರ್ಡ್ ನಂ 21ರ ಸದಸ್ಯ ಸದಾಶಿವ ದುರ್ಗಾಜಿ ದೋಶಿ, ವಾರ್ಡ ನಂ 22ರ ಪಾರ್ವತೆವ್ವ ರುದ್ರಪ್ಪ ಹರಗಿ, ವಾರ್ಡ್‌ ನಂ 17ರ ಸುನೀತಾ ಪುಂಡಲೀಕ ‌‌‌‌‌‌‌‌ಬೋವಿ, ವಾರ್ಡ 16ರ ಸುರೇಶ ಶಿವಲಿಂಗಪ್ಪ ಕಾಂಬಳೆ ಅವರು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರು.

ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ವಾರ್ಡ್ ನಂ 15ರ ಲತಾ ಲಕ್ಷ್ಮಣ ಗಾಯಕವಾಡ, ವಾರ್ಡ ನಂ 13ರ ದ್ರಾಕ್ಷಾಯಣಿ ಮಲ್ಲಿಕಾರ್ಜುನಯ್ಯ ಹಲಸಂಗಿಮಠ, ವಾರ್ಡ ನಂ 23ರ ರಾಜೇಸಾಬ್ ದಸ್ತಗೀರಸಾಬ್ ರಪುಗಾರ್ ಇವರು ಬಿಜೆಪಿಗೆ ಬೆಂಬಲ ನೀಡಿದರು.

ಸಂಭ್ರಮಾಚರಣೆ: ಚುನಾವಣೆಯಲ್ಲಿ ಆಯ್ಕೆ ಆದ ಕಾಂಗ್ರೆಸ್ ಪಕ್ಷದಿಂದ ಡಿ.ಜೆ.ಯೊಂದಿಗೆ ಮೆರವಣಿಗೆ, ಪಟಾಕಿ ಸಿಡಿಸಿ, ಗುಲಾಲ ಹಚ್ಚಿ, ಘೋಷಣೆ ಕೂಗಿ ಸಂಭ್ರಮಿಸಿದರು.

ಎಂದು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ನಗರದ ಅಭಿವೃದ್ಧಿಗೆ ಪಕ್ಷಭೇಧವಿಲ್ಲದೆ ಸಹಕಾರ ನೀಡಿ ನಗರದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಬಿಜೆಪಿಯಿಂದ 7 ಮಂದಿ ಉಚ್ಛಾಟನೆ

ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ ಆರೋಪದಲ್ಲಿ ಒಟ್ಟು ಏಳು ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ನಾಲ್ವರು ಸದಸ್ಯರಾದ ವಾರ್ಡ್ ನಂ 21ರ ಸದಾಶಿವ ದುರ್ಗಾಜಿ ದೋಶಿ ವಾರ್ಡ್‌ ನಂ 22ರ ಪಾರ್ವತೆವ್ವ ಹರಗಿ ವಾರ್ಡ್ ನಂ 17ರ ಸುನೀತಾ ಪುಂಡಲೀಕ ‌‌‌‌‌‌‌‌ಬೋವಿ ವಾರ್ಡ್ 16ರ ಸುರೇಶ ಶಿವಲಿಂಗಪ್ಪ ಕಾಂಬಳೆ ಇವರನ್ನು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ ಬಿಜೆಪಿ ಮುಖಂಡರು ಪುರಸಭೆ ಮಾಜಿ ಸದಸ್ಯರಾದ ಪುಂಡಲೀಕ ಬೋವಿ ಬಸವರಾಜ ಮಾನೆ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸಂಗನಗೌಡ ಕಾತರಕಿ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚ್ಚಾಟಿಸುವ ಅಧಿಕಾರವಿಲ್ಲ: ಜಂಟಿ ಹೇಳಿಕೆ

ಮುಧೋಳ: ‘ನಮ್ಮನ್ನು ಏಕಪಕ್ಷೀಯವಾಗಿ ಸರ್ವಾಧಿಕಾರಿ ಧೋರಣೆಯಿಂದ ಉಚ್ಚಾಟಿಸಲಾಗಿದೆ. 30 ವರ್ಷ ಪಕ್ಷನಿಷ್ಠರಾಗಿ ಹಲವಾರು ಚುನಾವಣೆಯಲ್ಲಿ ಗೆಲುವಿಗೆ ಕಾರಣರಾದ ನಮ್ಮನ್ನು ಉಚ್ಛಟಿಸುವ ಮುನ್ನ ನೋಟಿಸ್ ಸಹ ನೀಡಿಲ್ಲ’ ಎಂದು ಬಿಜೆಪಿಯಿಂದ ಉಚ್ಚಾಟಿತ ಮುಖಂಡರಾದ ರಾಮಣ್ಣ ತಳೇವಾಡ ಪುಂಡಲೀಕ ಬೋವಿ ಬಸವರಾಜ ಮಾನೆ ಹೇಳಿದ್ದಾರೆ.

ಜಂಟಿ ಪತ್ರಿಕಾ ಹೇಳಿಕೆ ನೀಡಿದ ಅವರು ‘ಪಕ್ಷದಿಂದ ಹಲವಾರು ಅಧಿಕಾರವನ್ನು ಪಡೆದಿರುವ ನಮ್ಮನ್ನು ಉಚ್ಚಾಟಿಸಲು ಗ್ರಾಮೀಣ ಮಂಡಲ ಅಧ್ಯಕ್ಷ ಸಂಗನಗೌಡ ಕಾತರಕಿ ಹಾಗೂ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ ಅವರಿಗೆ ಅಧಿಕಾರವೂ ಇಲ್ಲ ನೈತಿಕತೆಯೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯ

ವಸ್ಥಿತ ಸಂಘಟನೆ ಹಾಗೂ ಪಕ್ಷದ ನಿಷ್ಠಾವಂತ ಪ್ರಮುಖರ ಕಡೆಗಣೆ ಈ ನಗರಸಭೆ ಅಧ್ಯಕ್ಷ ಉಪಾದ್ಯಕ್ಷ ಸೋಲಿಗೆ ಕಾರಣ. ಸೋಲಿನ ಹೊಣೆಗಾರಿಕೆ ಹೊರದೆ ಅದನ್ನು ನಮ್ಮ ಮೇಲೆ ಆರೋಪ ಮಾಡಿ ಉಚ್ಚಾಟಿಸಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ರಾಜ್ಯ ಘಟಕ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ನಿಷ್ಠಾವಂತರಿಂದ ಆಂತರಿಕ ತನಿಖೆ ನಡೆಸಲು ವಿನಂತಿಸಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT