ಮುಧೋಳ: ‘ಭಾರತದಲ್ಲಿ ಭೂಮಿ ಮತ್ತು ಗೋವನ್ನು ಮಾತೃ ಸ್ವರೂಪದಲ್ಲಿ ಕಾಣುತ್ತೇವೆ. ಭೂ ತಾಯಿ ಅನ್ನವನ್ನು ನೀಡಿದರೆ ಗೋ ಮಾತೆ ಅಮೃತ ಸಮಾನವಾದ ಹಾಲು ನೀಡಿ ಸಲಹುತ್ತಾಳೆ’ ಎಂದು ಅಖಿಲ ಭಾರತೀಯ ಗೋಸೇವಾ ಗತಿವಿಧಿ ಪಾಲಕ ಶಂಕರಲಾಲಜೀ ತಿಳಿಸಿದರು.

ನಗರದ ಮರಾಠಾ ಸಮುದಾಯ ಭವನದಲ್ಲಿ ಆರ್ಎಸ್ಎಸ್ ನಗರ ಘಟಕ ಹಾಗೂ ಆನಂದನಗರ ವಸತಿ ಶಾಖೆಗಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಗೋವು ಮತ್ತು ನಾವು’ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದರು.

‘ದೇಸಿ ಗೋವುಗಳ ಸೇವೆ ಮಾಡಿದರೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಚರ್ಮ ರೋಗ, ಕ್ಯಾನ್ಸರ್ನಂಥ ಮಹಾಕಾಯಿಲೆಗಳು ಮಾಯವಾಗುತ್ತವೆ. ಯಾವುದೇ ದುಷ್ಪರಿಣಾಮ ಇರುವುದಿಲ್ಲ’ ಎಂದರು.

ಕರ್ನಾಟಕ ಉತ್ತರ ಪ್ರಾಂತದ ಗೋಸೇವಾ ಗತಿ ವಿಧಿಯ ಸಂಯೋಜಕ ದತ್ತಾತ್ರೇಯ ಭಟ್ಟ ಮಾತನಾಡಿ, ದೇಸಿ ಗೋವು ಸಂತತಿಗಳನ್ನು ಉಳಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದ ಅವರು ಗೋವಿನ ಉತ್ಪನ್ನಗಳಿಂದ ಆಗುವ ಹಲವಾರು ಪ್ರಯೋಜನಗಳನ್ನು ತಿಳಿಸಿದರು.

ಪ್ರಮುಖರಾದ ಬಸವರಾಜ ಮಾನೆ, ರಾಜು ಟಂಕಸಾಲಿ, ರಾಮಕೃಷ್ಣ ಬುದ್ನಿ, ಸೋಮಲಿಂಗ ಕೋಟಿ, ಉದಯ ವಾಳ್ವೇಕರ, ಪ್ರಮೋದ ಮಮದಾಪೂರ, ಸೋಮಶೇಖರ್ ಗೋಸಾರ, ನಿಂಗನಗೌಡ ನಾಡಗೌಡ ,.ಸಿ.ಎಂ.ಬದಾಮಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.