ಮಹಾಲಿಂಗಪುರ: ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ 2024-25ನೇ ಸಾಲಿನ ಕರ್ನಾಟಕ ವಲಯದ ಪ್ಲಾಟಿನಂ ಪ್ರಶಸ್ತಿಯನ್ನು ಚೆನ್ನೈನ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆ (ಸಿಸ್ಟಾ) ನೀಡಿ ಗೌರವಿಸಿದೆ.

ಪರಿಣಾಮಕಾರಿ ಕಬ್ಬಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ಕಾರ್ಖಾನೆಯ ಕಾರ್ಯವನ್ನು ಪರಿಗಣಿಸಿ ಕರ್ನಾಟಕ ವಲಯದ ‘ಅತ್ಯುತ್ತಮ ಕಬ್ಬು ಅಭಿವೃದ್ಧಿ ಪ್ರಶಸ್ತಿ’ಯನ್ನು ನೀಡಲಾಗಿದೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಸೆ.19 ರಂದು ನಡೆದ ಸಂಸ್ಥೆಯ 54ನೇ ವಾರ್ಷಿಕ ಸಮಾವೇಶದಲ್ಲಿ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಭಕ್ಷಿ, ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ, ಅಧಿಕಾರಿಗಳಾದ ವಿ.ಎಸ್.ಕಣಬೂರ, ಎಸ್.ಎಂ.ಪೇಟಿಮನಿ, ವಿ.ಎಸ್.ಭುಜನ್ನವರ, ರಾಮಚಂದ್ರ ಸೋನವಾಲ್ಕರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

‘ಕಾರ್ಖಾನೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಮೀರ ಸೊಮೈಯಾ ಅವರ ಮಾರ್ಗದರ್ಶನ, ರೈತರ ಸಹಕಾರ, ಅಧಿಕಾರಿಗಳು ಹಾಗೂ ಕಾರ್ಮಿಕರ ಸತತ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದು ಬಿ.ಆರ್.ಭಕ್ಷಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.