ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ದತ್ತು ಪಡೆದ ಎರಡನೇ ರಾಜಕಾರಣಿ

ಮುಧೋಳ ತಾಲ್ಲೂಕಿನ ಐದು ಸರ್ಕಾರಿ ಪ್ರೌಢಶಾಲೆಗಳ ದತ್ತು ಪಡೆದ ಡಿಸಿಎಂ ಗೋವಿಂದ ಕಾರಜೋಳ
Last Updated 24 ನವೆಂಬರ್ 2020, 8:13 IST
ಅಕ್ಷರ ಗಾತ್ರ

ಬಾಗಲಕೋಟೆ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಾವು ಪ್ರತಿನಿಧಿಸುವ ಮುಧೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಐದು ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ಪಡೆದಿದ್ದಾರೆ.

ಮುಧೋಳ ತಾಲ್ಲೂಕಿನ ಶಿರೋಳ, ಬೆಳಗಲಿ, ನಾಗರಾಳ, ಇಂಗಳಗಿ ಹಾಗೂ ಮುಗಳಖೋಡ ಕಾರಜೋಳ ದತ್ತು ಪಡೆದ ಪ್ರೌಢಶಾಲೆಗಳು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಗೋವಿಂದ ಕಾರಜೋಳ ದತ್ತು ಪ್ರಮಾಣ ಪತ್ರ ಪಡೆದರು.

ಈ ಹಿಂದೆ ಮುಧೋಳ ತಾಲ್ಲೂಕಿನಲ್ಲಿರುವ ತಮ್ಮ ಹುಟ್ಟೂರು ಯಡಹಳ್ಳಿಯ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದಿದ್ದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಶಿಕ್ಷಣ ಇಲಾಖೆಯ ಬೇರೆ ಬೇರೆ ಯೋಜನೆಗಳಡಿ ₹1.5 ಕೋಟಿಗೂ ಹೆಚ್ಚು ಅನುದಾನವನ್ನು ಶಾಲೆಗೆ ಕೊಡಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಪೀಠೋಪಕರಣಗಳ ಖರೀದಿಗೆ ನೆರವಾಗಿದ್ದನ್ನು ಸ್ಮರಿಸಬಹುದು.

ಕಾರಜೋಳ ಜಿಲ್ಲೆಯಲ್ಲಿ ಈಗ ಸರ್ಕಾರಿ ಶಾಲೆ ದತ್ತು ಪಡೆದ ಜನಪ್ರತಿನಿಧಿಗಳಲ್ಲಿ ಎರಡನೆಯವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT