ಬಾಗಲಕೋಟೆ: ಮದುವೆಯಾದಾಗಿನಿಂದ ಪತ್ನಿಗೆ ಕಿರುಕುಳ ನೀಡಿದ್ದಲ್ಲದೇ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಏಕಬೋಟೆ, 10 ವರ್ಷ ಜೈಲು ಶಿಕ್ಷೆ, ₹50 ಸಾವಿರ ದಂಡ ವಿಧಿಸಿದ್ದಾರೆ.

ನವನಗರದ ಸೆಕ್ಟರ್ ನಂ.3ರ ನಿವಾಸಿ ರೂಪಾ ಉರ್ಫ್ ಕಾವ್ಯ ಹಡಪದ ಮೃತರು. ರೂಪಾ ಅವರ ಪತಿ ಮಂಜುನಾಥ ಹಡಪದ ಹಾಗೂ ಮನೆಯವರು ಕೂಡಿಕೊಂಡು ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದರು. ಜತೆಗೆ ಎಲ್ಲಾದರೂ ಹೋಗಿ ಸಾಯಿ ಅಂತ ಪ್ರಚೋದನೆ ನೀಡಿದ್ದರಿಂದ ಮನೆಯ ಬೆಡ್ ರೂಮಿನಲ್ಲಿ ನೇಣು ಹಾಕಿಕೊಂಡು ರೂಪಾ ಮೃತರಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದಾಗ ಆಪಾದನೆ ರುಜುವಾತಾಗಿದೆ. ಮಂಜುನಾಥನಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಂ. ಹಂಜಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.