ಬೀಳಗಿ: ‘ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿರುವ ಕಬಡ್ಡಿ ಆಟವು ಪ್ರೊ ಕಬಡ್ಡಿಯಿಂದ ನಾಡಿನಾದ್ಯಂತ ಮನೆ ಮಾತಾಗಿದ್ದು, ತೆಗ್ಗಿ ಗ್ರಾಮವೂ ರಾಷ್ಟ್ರಮಟ್ಟದ ಕಬಡ್ಡಿ ಆಯೋಜಿಸುವ ಏಕೈಕ ಗ್ರಾಮವಾಗಿದೆ’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲ್ಲೂಕಿನ ತೆಗ್ಗಿ ಗ್ರಾಮದ ಸೋಮಲಿಂಗೇಶ್ವರ ಕಾರ್ತಿಕೋತ್ಸವದ ನಿಮಿತ್ತ ಸೋಮಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ತೆಗ್ಗಿ ವತಿಯಿಂದ ಅಮೆಚೂರ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಬಾಗಲಕೋಟೆ ಜಿಲ್ಲಾ ಅಮೆಚೂರ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ‘ಎ’ ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಮತ್ತು ಯುವಕರು ದುಷ್ಚಟಗಳಿಂದ ದೂರವಿರುತ್ತಾರೆ’ ಎಂದು ಹೇಳಿದರು.

ಕಬಡ್ಡಿ ಮ್ಯಾಟ್ ಹಾಗೂ ಸಲಕರಣೆಗಳಿಗಾಗಿ ₹5.39 ಲಕ್ಷ ಹಾಗೂ ಜಿಮ್ಗಾಗಿ ₹4.60 ಲಕ್ಷದ ಆದೇಶ ಪ್ರತಿಯನ್ನು ತೆಗ್ಗಿ ಸೋಮಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ನ ಪದಾಧಿಕಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ನೀಡಿದರು.

ಜಿಲ್ಲೆಯಾದ್ಯಂತ ಆಗಮಿಸಿದ ಸಾವಿರಾರು ಜನ ಕ್ರೀಡಾಭಿಮಾನಿಗಳು ಕಬಡ್ಡಿ ಆಟವನ್ನು ನೋಡಿ ಕಣ್ತುಂಬಿಕೊಂಡರು. ಡಿ.ಜೆ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಎಂ.ಎಸ್.ಕಾಳಗಿ, ಸೋಮನಗೌಡ ಪಾಟೀಲ, ಸೋಮು ಕೂಗಟಿ ,ಶಿವಲಿಂಗಪ್ಪ ಮರಡಿ, ಸಿದ್ದನಗೌಡ ಕೊಮಾರದೇಸಾಯಿ, ಎಸ್. ವೈ. ಕಿರಸೂರ, ಎ.ವಿ.ಪಾಟೀಲ , ವಿಠ್ಠಲ ಬಡಿಗೇರ , ಎಸ್.ಎಸ್.ವಜ್ಜರಮಟ್ಟಿ, ರವಿ ಮರಡಿ,ಚಂದ್ರು ಮಾದರ, ಯಲ್ಲಪ್ಪ ಸಂಶಿ ಇದ್ದರು.

ರಿಷಾಂಕ ದೇವಾಡಿಗ, ವಿಶಾಲ ಮಾನೆ, ವಿಠ್ಠಲ ಮೇಟಿ, ರಂಜಿತ ನಾಯ್ಕ, ಗಣೇಶ, ಸತ್ಯಪ್ಪ ಮಟ್ಟಿ, ಮುಂತಾದ ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಿದ್ದರು.

ಉತ್ತರ ಕನ್ನಡ, ಬಿ.ಪಿ.ಸಿ.ಎಲ್.ಮುಂಬೈ, ಟಿ.ಎಮ್.ಸಿ.ತಾಣೆ, ಸೋಮಲಿಂಗೇಶ್ವರ ತೆಗ್ಗಿ, ಜೆ.ಕೆ.ಅಕ್ಯಾಡೆಮಿ ಕೇರಳ, ಬೆಂಗಳೂರು, ಪೊರ್ಟ್ ಟ್ರಸ್ಟ್, ಡಿ.ವೈ.ಪಾಟೀಲ ಪುಣೆ, ಮಹಾರಾಷ್ಟ್ರ ಪೋಲೀಸ್, ಆರ್.ಬಿ.ಎಸ್ ಮುಂಬೈ ತಂಡ ಸೇರಿದಂತೆ 20 ಜನ ನಿರ್ಣಾಯಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.