ಕೆರೂರ: ‘ಜಾತಿ ಬೇದಭಾವ, ಪಕ್ಷ ಬೇಧ ಇಲ್ಲದೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಮನೆ ಬಾಗಿಲಿಗೆ ತಲುಪುತ್ತಿವೆ. ಇದರಿಂದ ಬಡವರಿಗೆ ಸಾಕಷ್ಟು ಸಹಾಯವಾಗಿದೆ’ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ಸಮೀಪದ ಕರಡಿಗುಡ್ಡ ಎಸ್.ಎನ್. ಗ್ರಾಮದಲ್ಲಿ ಸುಮಾರು ₹91 ಲಕ್ಷ ಹಾಗೂ ಮುಷ್ಠಿಗೇರಿ ಗ್ರಾಮದಲ್ಲಿ ₹35 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಬಹಳಷ್ಟು ಮುಖ್ಯವಾಗಿದೆ. ಗುಣಮಟ್ಟದ ಕಾಮಗಾರಿಗಳನ್ನು ಗ್ರಾಮಸ್ಥರು ಪರಿಶೀಲಿಸಬೇಕು ಎಂದರು.

ಮುಷ್ಠಿಗೇರಿ ಹಾಗೂ ಕರಡಿಗುಡ್ಡ ಎಸ್.ಎನ್. ಗ್ರಾಮಗಳಲ್ಲಿ ತಲಾ ₹35 ಲಕ್ಷ ವೆಚ್ಚದ ಹೈಟೆಕ್ ಗಂಥ್ರಾಲಯ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕರಡಿಗುಡ್ಡ ಎಸ್.ಎನ್. ಗ್ರಾಮದ ಸದಾನಂದ ಸ್ವಾಮೀಜಿ, ಅವಳಿ ಜಿಲ್ಲೆಯ ಹಾಲು ಒಕ್ಕೂಟ ಅಧ್ಯಕ್ಷ ಈರಣ್ಣ ಕರಿಗೌಡ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತ ಸಿದ್ದಣ್ಣವರ್, ಎಂ. ಎಚ್ ನರಿ, ವೈ.ಎಚ್. ಮನ್ನೂರ, ಬಿ.ವೈ ಶೆಟ್ಟಪ್ಪನವರ, ಚನ್ನಪ್ಪ ತಳವಾರ, ಆನಂದಗೌಡ ಪಾಟೀಲ, ಶಿವು ಕೋನೇರಿ, ಉಸ್ಮಾನಸಾಬ ಅತ್ತಾರ, ಬಸವರಾಜ ಬ್ಯಾಹಟ್ಟಿ, ಕನ್ನಯು ಪೂಜಾರಿ, ಬಿಸಿಎಂ ತಾಲ್ಲೂಕು ಅಧಿಕಾರಿ ಹೇಮಲತಾ ಶಿಂದೆ, ತಾಲ್ಲೂಕು ಪಶುವೈದ್ಯಾಧಿಕಾರಿ ಶ್ರೀಕಾಂತ ಶಬನಿಶ್, ಪಿಡಿಒ ಶೋಭಾ ಚವ್ಹಾಣ, ನಿರ್ಮಿತ ಕೇಂದ್ರ ಎಂಜಿನಿಯರ್ ಬಸವರಾಜ ಚಿಟಗುಬ್ಬಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಅಜಿತ್ ದಳವಾಯಿ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.