ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡಲಸಂಗಮ: ತುಂಬಿದ ಕೃಷ್ಣಾ, ಮಲಪ್ರಭಾ ಒಡಲು

Published 16 ಜೂನ್ 2024, 13:48 IST
Last Updated 16 ಜೂನ್ 2024, 13:48 IST
ಅಕ್ಷರ ಗಾತ್ರ

ಕೂಡಲಸಂಗಮ: ಮಲಪ್ರಭಾ, ಕೃಷ್ಣಾ ನದಿಯ ಅಚ್ಚುಕಟ್ಟಿನ ಪ್ರದೇಶದಲ್ಲಿ 10 ದಿನಗಳಿಂದ ಸುರಿದ ಮಳೆಯಿಂದ ನಾರಾಯಣಪುರ ಜಲಾಶಯದ ಹಿನ್ನೀರಿನ ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ನೀರಿನ ಜಲರಾಶಿ ಮೈದುಂಬಿದೆ.

ಮೂರು ತಿಂಗಳಿನಿಂದ ಬರಿದಾಗಿದ್ದ ಕೃಷ್ಣಾ, ಮಲಪ್ರಭಾ ನದಿಯ ಒಡಲು ಹತ್ತು ದಿನಗಳಲ್ಲಿ ತುಂಬಿಕೊಂಡು ಪುಃ ಜೀವಕಳೆ ಪಡೆದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಾಲ್ಕು ದಿನಗಳಿಂದ ತಂಡೋಪ ತಂಡವಾಗಿ ಪ್ರವಾಸಿಗರು ಕ್ಷೇತ್ರಕ್ಕೆ ಬಂದು ನದಿಯ ವಿಹಂಗಮ ದೃಶ್ಯ ನೋಡಿ ಸಂಭ್ರಮಿಸುತ್ತಿದ್ದಾರೆ.

ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗೆ ನದಿಯ ಒಡಲು ಬರಿದಾಗುತ್ತಿತ್ತು. ಈ ವರ್ಷ ಏಪ್ರಿಲ್ ಮೊದಲ ವಾರ ಇಳಿಮುಖಗೊಂಡು ಜೂನ್‌ ಎರಡನೇ ವಾರಕ್ಕೆ ತುಂಬಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT