ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಗೆ ಸ್ಪರ್ದಿಸಲ್ಲ: ನ್ಯಾಮಗೌಡ

Published 16 ಮಾರ್ಚ್ 2024, 15:56 IST
Last Updated 16 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಜಮಖಂಡಿ: ‘ಲೋಕಸಭೆ ಚುಣಾವಣೆ ಟಿಕೆಟ್‌ಗಾಗಿ ನಾನು ಅರ್ಜಿ ಹಾಕಿರಲಿಲ್ಲ, ಲೋಕಸಭೆ ಚುಣಾವಣೆ ಮೇಲೆ ನನಗೆ ಆಸಕ್ತಿ ಇಲ್ಲ, ಬಾಗಲಕೋಟೆ ಮುಖಂಡರು ನಾನು ಸೂಕ್ತ ಅಭ್ಯರ್ಥಿಯಾಗುತ್ತೇನೆಡ ಎಂದು ನಾಯಕರಿಗೆ ಹೇಳಿದ ಪರಿಣಾಮ ರಾಜ್ಯ ಮತ್ತು ರಾಷ್ಟ್ರ ನಾಯಕರು ಚುಣಾವಣೆಗೆ ತಯಾರಾಗಲು ಒತ್ತಾಯ ಮಾಡಿದ್ದರು. ಹಲವು ಬಾರಿ ಕರೆಯಿಸಿ ಮಾತನಾಡಿದ್ದಾರೆ. ಆದರೆ ನಾನು ನಿರಾಕರಿಸಿದ್ದೇನೆ’ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ನನ್ನ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಚಾರಿಸಿ ಹೇಳುವುದಾಗಿ ತಿಳಿಸಿದ್ದೆ. ಕಾಂಗ್ರೆಸ್ ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಗೆಲ್ಲಿಸುವೆ. ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT