ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ: ಜು.18ರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

Published 1 ಜೂನ್ 2024, 15:46 IST
Last Updated 1 ಜೂನ್ 2024, 15:46 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಬೂದಿನಗಡದಿಂದ ಕಮತಗಿವರೆಗಿನ ರಸ್ತೆ ಕಾಮಗಾರಿಯನ್ನು ಜುಲೈ 18ರೊಳಗೆ ಪೂರ್ಣಗೊಳಿಸುವಂತೆ ಬಾಗಲಕೋಟೆಯ ಪಿಎಂಜಿಎಸ್‌ವೈ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಬಸವ ಕಿರಗಿ ಹಾಗೂ ಸೆಕ್ಷನ್ ಎಂಜಿನಿಯರ್ ಅನಿಲ ಜಾಧವ ಅವರು ಗುತ್ತಿಗೆದಾರರಿಗೆ ಸೂಚಿಸಿದರು.

ಮೇ 27ರಂದು ‘ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸವಾರರ ಆಗ್ರಹ’ ಎಂಬ ಶೀರ್ಷಿಕೆಯಲ್ಲಿ  ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಶುಕ್ರವಾರ ರಸ್ತೆ ಕಾಮಗಾರಿ ವೀಕ್ಷಿಸಿದರು. ‘ಮಳೆಯಿಂದ ಕಾಮಗಾರಿ ಕಳಪೆಯಾಗದಂತೆ ಕ್ರಮ ವಹಿಸಿ’ ಎಂದೂ ಹೇಳಿದರು.

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಹಂತ-3ರಡಿ ಅಂದಾಜು ₹1.97 ಕೋಟಿ ಮೊತ್ತದ, 3 ಕಿ.ಮೀ.ವರೆಗಿನ ಕಾಮಗಾರಿ ಜುಲೈ 18ಕ್ಕೆ ಮುಗಿಯಬೇಕಿದೆ. ಮಳೆಗಾಲ ಆರಂಭವಾದರೂ, ಶೇ 20ರಷ್ಟು ಕಾಮಗಾರಿ ಬಾಕಿ ಉಳಿಸಿದ್ದರಿಂದ ಬಾಗಲಕೋಟೆ, ಶಿರೂರ, ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ, ಕಮತಗಿ ಮೊದಲಾದ ಗ್ರಾಮದವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT