ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀನಗಡ | ಗೃಹಲಕ್ಷ್ಮೀ ಯೋಜನೆ: ಲಾಗಿನ್ ದುರ್ಬಳಕೆ ಹಿನ್ನೆಲೆ ನೋಟಿಸ್

Published 7 ಆಗಸ್ಟ್ 2023, 16:56 IST
Last Updated 7 ಆಗಸ್ಟ್ 2023, 16:56 IST
ಅಕ್ಷರ ಗಾತ್ರ

ಅಮೀನಗಡ: ಗೃಹಲಕ್ಷ್ಮೀ ಯೋಜನೆಯ ಅರ್ಜಿಗೆ ಸಂಬಂಧಿಸಿದಂತೆ ಲಾಗಿನ್ ಐಡಿ ದುರ್ಬಳಕೆ ಕುರಿತು ಸಮೀಪದ ಐಹೊಳೆ ಗ್ರಾಪಂ ಡಿಇಒಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಐಹೊಳೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಎಚ್.ಎಂ.ಮಠದ ಅವರ ವಿರುದ್ಧ ಸಾರ್ವಜನಿಕರು ಮೌಖಿಕ ದೂರು ನೀಡಿದ್ದರು.

‘ಐಹೊಳೆ ಗ್ರಾಮ ಪಂಚಾಯಿತಿಯ ಗೃಹಲಕ್ಷ್ಮೀ ಯೋಜನೆಯ ಲಾಗಿನ್ ಐಡಿ ಬಳಸಿಕೊಂಡು ಗುಡೂರ (ಎಸ್‌ಸಿ) ಗ್ರಾಮದಲ್ಲಿ ಯೋಜನೆಯ ನೋಂದಣಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ.  ಈ ಹಿನ್ನೆಲೆಯಲ್ಲಿ 2 ದಿನದಲ್ಲಿ ಈ ಕುರಿತು ವಿವರಣೆ ನೀಡಬೇಕು. ತಪ್ಪಿದ್ದಲ್ಲಿ ಸೂಕ್ತ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಪಿಡಿಒ ಮಹಾಂತೇಶ ಗೋಡಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT