ಕ್ವಿಜ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತ ರನ್ನರ್ ಅಪ್ ತಂಡಗಳೊಂದಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ.
‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಪ್ರಮುಖ ಸ್ಪರ್ಧೆಗೆ ಆಯ್ಕೆಯಾಗಿದ್ದೇ ನಮಗೆ ಖುಷಿ ತಂದಿತ್ತು. ಕ್ವಿಜ್‌ನಲ್ಲಿ ಮೊದಲಿಗರಾಗಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ನಮ್ಮ ಸಂತಸ ಇಮ್ಮಡಿಗೊಳಿಸಿದೆ. ‘ಪ್ರಜಾವಾಣಿ’ಯ ಪ್ರಶಸ್ತಿ ಪಡೆದಿರುವುದು ಜೀವನದುದ್ದಕ್ಕೂ ಮರೆಯಲಾಗದ ಕ್ಷಣ
ತೇಜಲ್ ಅಮಾರಿ ಹಾಗೂ ಸ್ತುತಿ ರಾಠಿ (ಪ್ರಥಮ ಬಹುಮಾನ ವಿಜೇತರು)
ಸ್ಪರ್ಧೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ರನ್ನರ್ ಅಪ್ ಆಗಿರುವುದು ಖುಷಿ ತಂದಿದೆ. ಆತ್ಮಸ್ಥೈರ್ಯ ಹೆಚ್ಚಿಸಿದೆ. ಜ್ಞಾನ ಗಳಿಕೆಗೆ ಅವಕಾಶ ನೀಡಿದ ‘ಪ್ರಜಾವಾಣಿ’ ಬಳಗಕ್ಕೆ ಧನ್ಯವಾದಗಳು
ಸುಮಿತ್ ಕಳಸಗೊಂಡ ಹಾಗೂ ಚೇತನ್ ವಜ್ಜರಮಟ್ಟಿ (ದ್ವಿತೀಯ ಬಹುಮಾನ ವಿಜೇತರು)
ಮಕ್ಕಳು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಎಲ್ಲ ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ದಿನನಿತ್ಯದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳು ಪತ್ರಿಕೆ ಓದಬೇಕು.
ರಶ್ಮಿ ರಾವಳ, ಶಿಕ್ಷಕಿ, ಬಿ.ಎಸ್.ಖೋತ ಅಂತರರಾಷ್ಟ್ರೀಯ ಶಾಲೆ, ಅನಗವಾಡಿ.
ಕ್ವಿಜ್ ಬಹಳ ಚೆನ್ನಾಗಿ ನಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಗೊತ್ತಾಯಿತು. ಮುಂದಿನ ವರ್ಷ ಉತ್ತಮ ಸಿದ್ಧತೆಯೊಂದಿಗೆ ಭಾಗವಹಿಸಲು ಪ್ರೇರಣೆಯಾಗಿದೆ
ನವ್ಯಾ ಹಿರೇಮಠ, ಸೇಂಟ್ ಆ್ಯನ್ಸ್ ಸ್ಕೂಲ್ ಬಾಗಲಕೋಟೆ.
ಕ್ವಿಜ್ ಸಾಮಾನ್ಯ ಜ್ಞಾನದ ಮಹತ್ವ ತಿಳಿಸಿತು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಪ್ರಶಸ್ತಿ ಸಿಗಲಿ, ಬಿಡಲಿ. ಹೆಚ್ಚಿನ ಜ್ಞಾನವಂತೂ ಸಿಗುತ್ತದೆ. ಜ್ಞಾನ ಗಳಿಸಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆ