ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಪುರಿ ಜಗನ್ನಾಥಸ್ವಾಮಿ ರಥೋತ್ಸವ

Published 7 ಜುಲೈ 2024, 14:39 IST
Last Updated 7 ಜುಲೈ 2024, 14:39 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದಲ್ಲಿ ಪುರಿ ಶ್ರೀ ಜಗನ್ನಾಥ ಸ್ವಾಮಿ ದೇವರ ರಥೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.

ಪಟ್ಟಣದ ಜಗದೀಶ ರಾಧಾಕೃಷ್ಣ ಮಂದಿರದಿಂದ ಆರಂಭವಾದ ಪುರಿ ಜಗನ್ನಾಥಸ್ವಾಮಿ ದೇವರ ರಥೋತ್ಸವದ ಮೆರವಣಿಗೆ  ಪ್ರಮುಖ ಬೀದಿಗಳಲ್ಲಿ ನಡೆಯಿತು.  ಮಾರವಾಡಿ ಸಮಾಜದ ಮಹಿಳೆಯರು, ಯುವಕ, ಯುವತಿಯರು ದಾಂಡಿಯಾ ನೃತ್ಯ ಹಾಗೂ ದೇವರ ಭಜನೆ ಮಾಡಿ ಸಂಭ್ರಮಿಸಿದರು.

ಇಚ್ಚಲಕರಂಜಿ, ಪುನಾ, ನಾಸಿಕ, ಬಾಗಲಕೋಟೆ, ಹುಬ್ಬಳ್ಳಿ, ಸಾಂಗ್ಲಿ, ಇಲಕಲ್, ಅಮಿನಗಡ, ಧಾರವಾಡ ಸೇರಿದಂತೆ ಅನೇಕ ನಗರ ಪಟ್ಟಣಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು.

ಸಂಪತ್‌ ಕುಮಾರ ರಾಠಿ, ಗೋಪಾಲ ಸೋನಿ,ಶ್ರೀಕಾಂತ ಸೋನಿ,ಸುರೇಶ ಇನಾನಿ, ಗೋಪಾಲ ಭಟ್ಟಡ, ಸಂಜು ಧೋತಲಾ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT