– ರೇಣುಕಾ ಮಡ್ಡಿಮನಿ, ಮಹಾಲಿಂಗಪುರ
ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ
ದುಡಿಯಲಿಕ್ಕೆ ಆಗದ ವಯಸ್ಸಿನಲ್ಲಿರುವವರಿಗೆ ಬಹಳ ಅನುಕೂಲ ಆಗಲಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಲಿದ್ದಾರೆ. ಕುಟುಂಬ ನಿರ್ವಹಣೆ ಸರಳವಾಗಲಿದೆ. ಬಸ್ ಪ್ರಯಾಣ ಉಚಿತ ಮಾಡಿರುವುದರಿಂದಲೂ ಅನುಕೂಲವಾಗಲಿದೆ.
– ಗೌರವ ತುಂಬರಮಟ್ಟಿ, ನವನಗರ
ನುಡಿದಂತೆ ನಡೆದ ಸರ್ಕಾರ
ಬಡ, ಮಧ್ಯಮ ವರ್ಗಗಳ ಜನರಿಗೆ ಬಹಳ ಅನುಕೂಲವಾಗಲಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಇದನ್ನು ಸಹಿಸದ ಕೆಲವರು ಬಿಟ್ಟಿ ಭಾಗ್ಯಗಳೆಂದು ಟೀಕೆ ಮಾಡುತ್ತಿದ್ದಾರೆ. ಅವರೊಮ್ಮೆ ಬಡವರ ಜೀವನವನ್ನು ನೋಡಬೇಕು. ಆಗ ಅವರಿಗೆ ಬಡವರ ಸಂಕಷ್ಟ ಅರ್ಥವಾಗುತ್ತದೆ
-ರಕ್ಷಿತಾ ಈಟಿ ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್