ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರದಾಳ | ಸಸಾಲಟ್ಟಿಯ ಶಂಕರಯ್ಯ ಶ್ರೀ ಲಿಂಗೈಕ್ಯ

Published 29 ಜನವರಿ 2024, 15:34 IST
Last Updated 29 ಜನವರಿ 2024, 15:34 IST
ಅಕ್ಷರ ಗಾತ್ರ

ತೇರದಾಳ: ತಾಲ್ಲೂಕಿನ ಸಸಾಲಟ್ಟಿ ಶಿವಲಿಂಗೇಶ್ವರ ಮಠದ ಪೂಜ್ಯರು, ಮೌನಯೋಗಿ ಶಂಕರಯ್ಯ ಶ್ರೀ (72) ಸೋಮವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.

ಶ್ರೀಮಠದಿಂದ ಮುಗಳಖೋಡ ರಸ್ತೆಯಲ್ಲಿರುವ ಶಿವಲಿಂಗೇಶ್ವರ ಶಾಲೆಯವರೆಗೆ ಶ್ರೀಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತರಲಾಯಿತು. ಬಳಿಕ ಶ್ರೀಮಠದ ಆವರಣದಲ್ಲಿ ಇರಿಸಿ ಭಕ್ತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 

ಶಿವಲಿಂಗೇಶ್ವರ ಕೃರ್ತ ಗದ್ದುಗೆ ಇರುವ ದೇವಸ್ಥಾನದ ಹೊರಭಾಗ ಸಕಲ ವಿಧಿ–ವಿದಾನಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

ಶೇಗುಣಶಿ ವಿರಕ್ತಮಠದ ಡಾ. ಮಹಾಂತಪ್ರಭು, ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ, ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಡಾ.ಮುರುಘರಾಜೇಂದ್ರ ಶ್ರೀ, ಶಿರಗೂರು ಕಲ್ಮೇಶ್ವರ ಆಶ್ರಮದ ಅಭಿನವ ಕಲ್ಮೇಶ್ವರ ಶ್ರೀ ಸೇರಿದಂತೆ ಹಲವು ಮಠಾಧೀಶರು, ತೇರದಾಳ ಶಾಸಕ ಸಿದ್ದು ಸವದಿ, ಮುಖಂಡ ಮುತ್ತಣ್ಣ ಹಿಪ್ಪರಗಿ ಸೇರಿದಂತೆ ಗ್ರಾಮದ ಮುಖಂಡರು, ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT