ಕುರುಬ ಸಮಾಜದ ಸಚಿವರು, ಶಾಸಕರು ತ್ಯಾಗಕ್ಕೆ ಸಿದ್ಧರಾಗಿ: ಈಶ್ವರಾನಂದಪುರಿ ಸ್ವಾಮೀಜಿ
ಬಾಗಲಕೋಟೆ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯುವ ವಿಚಾರದಲ್ಲಿ ಅಗತ್ಯ ಬಿದ್ದರೆ ಸಮಾಜದ ಸಚಿವರು ಹಾಗೂ ಶಾಸಕರಿಗೆ ಅಧಿಕಾರ ತ್ಯಾಗಕ್ಕೆ ಮುಂದಾಗುವಂತೆ ಕೇಳಲಿದ್ದೇವೆ ಎಂದು ಕನಕಗುರುಪೀಠದ ಹೊಸದುರ್ಗ ಪೀಠದ ಜಗದ್ಗುರು ಈಶ್ವರನಾನಂದ ಪುರಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿರುವ ಬೆಳಗಾವಿ ವಿಭಾಗ ಮಟ್ಟದ ಕುರುಬ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಕುರುಬ ಸಮಾವೇಶಕ್ಕೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ: ಈಶ್ವರಾನಂದಪುರಿ ಸ್ವಾಮೀಜಿ
ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸಿಗಲೇಬೇಕು. ಶಾಸಕರು,ಮಂತ್ರಿಗಳು ಸಮಾಜಕ್ಕಾಗಿ ಅಧಿಕಾರ ತ್ಯಾಗ ಮಾಡಬೇಕೆಂದರೆ ಮಾಡಲೇಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಸಮಯ ಬಂದರೆ ನಮ್ಮ ಶಾಸಕರಿಗೂ ಅಧಿಕಾರ ತ್ಯಾಗಕ್ಕೆ ಹೇಳ್ತೀವಿ. ಖಂಡಿತ ಅಧಿಕಾರ ತ್ಯಾಗಕ್ಕೆ ಕೇಳೇ ಕೇಳುತ್ತೇವೆ ಎಂದರು.
ಕುರುಬ ಸಮಾಜದ ಎಚ್. ವಿಶ್ವನಾಥ,ಎಂ.ಟಿ.ಬಿ ನಾಗರಾಜ ಹಾಗೂ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸಕಾ೯ರ ಬರುವಲ್ಲಿ ನಮ್ಮ ಸಮಾಜದ ನಾಲ್ವರು ಶಾಸಕರ ಪಾತ್ರ ಇದೆ. ಅವರು ಬಂದಿದ್ದರಿಂದ ಬಿಜೆಪಿ ಸಕಾ೯ರ ಬಂತು. ಹೀಗಾಗಿ ಮಾತು ಕೊಟ್ಟಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆಯಬೇಕು. ಅವರು ಮಾತು ಉಳಿಸಿಕೊಳ್ಳಲಿದ್ದಾರೆ ಎನ್ನುವ ಭರವಸೆ ಇದೆ. ಎಚ್.ವಿಶ್ವನಾಥ, ಎಂ.ಟಿ.ಬಿ. ನಾಗರಾಜ, ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಏನು ಕ್ರಮ ಕೈಗೊಳ್ಳಬೇಕು ಎಂದು ನಿಧಾ೯ರ ಮಾಡಲಿದ್ದೇವೆ. ನ್ಯಾಯ ಸಿಗದೇ ಹೋದರೆ ಸಕಾ೯ರದಲ್ಲಿ ಮುಂದುವರೆಯುವ ಮತ್ತು ಬಿಡುವ ಬಗ್ಗೆ ಚಿಂತನೆ ಮಾಡಲಿದ್ದೇವೆ ಎಂದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.