ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಕಳವು: ಆರೋಪಿ ಬಂಧನ

Published 20 ಮಾರ್ಚ್ 2024, 15:30 IST
Last Updated 20 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಗುಳೇದಗುಡ್ಡ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಳುವಾಗಿದ್ದ ಮೋಟರ್ ಸೈಕಲ್‍ ಅನ್ನು ಸ್ಥಳೀಯ ಪೋಲಿಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ, ಮೋಟರ್ ಸೈಕಲ್‍ ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪಿಎಸ್‍ಐ ಲಕ್ಷ್ಮಣ ಆರಿ ತಿಳಿಸಿದ್ದಾರೆ.

ಪಟ್ಟಣದ ಬಸವೇಶ್ವರ ನಗರದ ಮಹಿಬೂಬಸಾಬ್‌ ಮುಕ್ತುಮಸಾಬ್‌ ಮುಲ್ಲಾ ಅವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಮೋಟರ್ ಸೈಕಲ್‍ ಅನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೋಲಿಸರು ಪಟ್ಟಣದ ಬಸವೇಶ್ವರ ನಗರದ ಆರೋಪಿ ಲಕ್ಷ್ಮಣ ಅಂಬಾಜಿ ಗಣಾಚಾರಿಯನ್ನು ಬಂಧಿಸಿ, ಮೋಟರ್ ಸೈಕಲ್‍ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕ್ರೈಂ ಪಿಎಸ್‍ಐ ಬಿ.ಆರ್.ಬಂಕಾಪೂರ, ಸಿಬ್ಬಂದಿ ಎಚ್.ಪಿ. ಕುಗಟಿ, ಹನಮಂತ ಭೂವಿ, ಕೆ.ವೈ.ಸೂಡಿ, ವಿಜಯ ತುಂಬದ, ಜಿ.ಎನ್. ಮನ್ನಿಕಟ್ಟಿ, ಶರಣಪ್ಪ ಕೂಡ್ಲೆಪ್ಪನವರ, ಸಂಗಮೇಶ ಮರೋಳ, ಎಸ್.ಎಸ್. ಅಂಗಡಿ, ವೈ.ಬಿ. ಮನ್ನಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT