ಇಳಕಲ್ ಮಹಾಂತೇಶ ಚಿತ್ರಮಂದಿರ ಹತ್ತಿರದ ಹಾಳಾದ ರಸ್ತೆ

ಈಗಾಗಲೇ ತಗ್ಗುಗಳಿರುವ ರಸ್ತೆಗಳನ್ನು ಪರಿಶೀಲನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಆರಂಭಿಸಲಾಗುವುದು
ಎಸ್.ಸಿ. ಹಿರೇಮಠ ಕಿರಿಯ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಜಮಖಂಡಿ
ಪಟ್ಟದಕಲ್ಲು-ನಾಗರಾಳ ರಸ್ತೆ ಹದಗೆಟ್ಟಿದ್ದರಿಂದ ಪಟ್ಟದಕಲ್ಲಿಗೆ ಗುಳೇದಗುಡ್ಡ ಸಾರಿಗೆ ಸಂಸ್ಥೆಯ ಘಟಕದಿಂದ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ
ಮುತ್ತಣ್ಣ, ತೋಟಗೇರರಾಜ್ಯ ಹೆದ್ದಾರಿ 44ರ ಚಿತ್ತರಗಿ ಸಮೀಪ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತಿದೆ
ರಬಕವಿ–ತೇರದಾಳ ರಸ್ತೆಯಲ್ಲಿನ ಗುಂಡಿಗಳು
ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ
ಕೂಡಲಸಂಗಮ: ಐತಿಹಾಸಿಕ ಪ್ರವಾಸಿತಾಣ ಕೂಡಲಸಂಗಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹಾಳಾಗಿದ್ದು, ನಿತ್ಯ ಪ್ರವಾಸಿಗರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲಸಂಗಮದಿಂದ ಐಹೊಳೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 44ರ ಬೆಳಗಲ್ ಕ್ರಾಸ್‌ನಿಂದ ಅಮೀನಗಡವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಕೂಡಲಸಂಗಮಕ್ಕೆ ಬರುವ ಬಹುತೇಕ ಪ್ರವಾಸಿಗರು ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರ, ಬಾದಾಮಿಯ ಐತಿಹಾಸಿಕ ಸ್ಥಳ ನೋಡಲು ಹೋಗುತ್ತಾರೆ. ಕೂಡಲಸಂಗಮದಿಂದ ಐಹೊಳೆಗೆ 35 ಕಿ.ಮೀ ಅಂತರ ಇದ್ದು, ಈ ಮಾರ್ಗದ ಬೆಳಗಲ್ ಕ್ರಾಸ್‌ನಿಂದ ಅಮೀನಗಡದವರೆಗೆ ರಸ್ತೆ ಹಾಳಾಗಿ ನಾಲ್ಕು ವರ್ಷಗಳಾಗಿವೆ. ಚಿತ್ತರಗಿಯಿಂದ ಗಂಗೂರವರೆಗಿನ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಚಿತ್ತರಗಿಯಿಂದ ತಿಮ್ಮಾಪುರ ಕ್ರಾಸ್‌ವರೆಗಿನ ರಸ್ತೆ ಸಂಚರಿಸಲು ಬಾರದ ಸ್ಥಿತಿಯಲ್ಲಿದೆ. ರಸ್ತೆ ಹಾಳಾಗಿರುವುದರಿಂದ ಪ್ರವಾಸಿಗರು ಸುತ್ತಿ ಬಳಸಿ ಕೂಡಲಸಂಗಮಕ್ಕೆ ಬರುವಂತಾಗಿದೆ.
ಗುಳೇದಗುಡ್ಡ ತಾಲ್ಲೂಕಿನ ಆಸಂಗಿ-ನಿಂಬಲಗುಂದಿ ಮಾರ್ಗದ ರಸ್ತೆ ಸಂಪೂರ್ಣ ಹಾಳಾಗಿದೆ