ಸೋಮವಾರ, ಜನವರಿ 20, 2020
20 °C

ಸ್ಕೂಟಿಗೆ ಟ್ರಕ್ ಡಿಕ್ಕಿ: ಇಬ್ಬರು ಮಕ್ಕಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಹುನಗುಂದ ತಾಲ್ಲೂಕು ಕೂಡಲಸಂಗಮ ಕ್ರಾಸ್ ಬಳಿ ಭಾನುವಾರ ಸ್ಕೂಟಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. 

ಸೊಲ್ಲಾಪುರ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50ರ ಮಲಪ್ರಭಾ ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಸಮೀಪದ ಇದ್ದಲಗಿ ಗ್ರಾಮದ ನಬಿಸಾಬ್ ಮುಗಳಿ ಹಾಗೂ ಸಲ್ಮಾ ದಂಪತಿ ಪುತ್ರ  ಜಾವೀದ್ (10) ಹಾಗೂ ಸಂಬಂಧಿ ಶರೀಫ್ ವಾಲಿಕಾರ ಅವರ ಪುತ್ರ ಫೈಸಲ್ (7) ಮೃತಪಟ್ಟವರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಉದ್ಯೋಗಿಯಾದ ಸಲ್ಮಾ ಮಕ್ಕಳನ್ನು ಕೂರಿಸಿಕೊಂಡು ಇದ್ದಲಗಿಯಿಂದ ಕೂಡಲಸಂಗಮಕ್ಕೆ ಹೊರಟಿದ್ದರು. ಈ ವೇಳೆ ಸ್ಲಾಗ್‌ ತುಂಬಿಕೊಂಡು ವಿಜಯಪುರದತ್ತ ಹೊರಟಿದ್ದ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಲ್ಮಾ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು