ಬಾದಾಮಿ: ಚಾಲುಕ್ಯರ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ಮಹಾಕೂಟೇಶ್ವರ ದೇವಾಲಯದ ಆವರಣದಲ್ಲಿ ಸಾವಿರಾರು ವರ್ಷಗಳಿಂದ ನೀರಿನಿಂದ ಭರ್ತಿಯಾಗಿರುವ ಎರಡು ಪುಷ್ಕರಣಿಗಳನ್ನು ವೀಕ್ಷಿಸಬಹುದಾಗಿದೆ.

ಮಳೆಯ ಕೊರತೆಯಿಂದ ತಾಲ್ಲೂಕಿನ ತೆರೆದ ಬಾವಿ, ಕೆರೆ, ಹಳ್ಳಗಳು ಮತ್ತು ಬನಶಂಕರಿ ಪುಷ್ಕರಣಿ ಬತ್ತಿ ಎರಡು ದಶಕಗಳಾಗಿವೆ. ಆದರೆ ಮಹಾಕೂಟೇಶ್ವರ ಪುಷ್ಕರಣಿಗಳು ಸಾವಿರಾರು ವರ್ಷಗಳಿಂದ ನೀರಿನಿಂದ ತುಂಬಿವೆ.

6ನೇ ಶತಮಾನದಲ್ಲಿ ಚಾಲುಕ್ಯರ ದೊರೆಗಳು ಮಹಾಕೂಟೇಶ್ವರ ದೇವಸ್ಥಾನದ ಪರಿಸರದಲ್ಲಿ ಎರಡು ಪುಷ್ಕರಣಿಗಳನ್ನು ಕಾಣಬಹುದು. ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯದ ಮಧ್ಯದಲ್ಲಿ ಆಯತಾಕಾರದ ದೊಡ್ಡ ಪುಷ್ಕರಣಿಯನ್ನು ನಿರ್ಮಿಸಿದ್ದಾರೆ. ಇದಕ್ಕೆ ವಿಷ್ಣು ಪುಷ್ಕರಣಿ ಎನ್ನವರು. ಸಾವಿರಾರು ವರ್ಷಗಳಿಂದ ನೀರಿನ ಬುಗ್ಗೆ ಭೋರ್ಗರೆದು ಕಾಲುವೆ ಮೂಲಕ ಹೊರಗೆ ಹೋಗುತ್ತಿದೆ.

ಭೂಮಿಯಿಂದ ಅಂದಾಜು 8 ಅಡಿ ಆಳದ ಪುಷ್ಕರಣಿಯಲ್ಲಿ 5 ಅಡಿ ನೀರು ಸದಾ ಸಂಗ್ರಹವಾಗಿದೆ. ಪುಷ್ಕರಣಿಯ ಉತ್ತರದಲ್ಲಿ ಚತುರ್ಮುಖ ಬ್ರಹ್ಮ ದೇವಾಲಯವಿದೆ. ಪುಷ್ಕರಣಿಯ ವಾಯವ್ಯದಲ್ಲಿ ಈಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಈಜು ಬಲ್ಲವರು ನೀರಿನಲ್ಲಿಯೇ ಒಳಗೆ ಹೋಗಿ ದರ್ಶನ ಪಡೆಯುವರು.

ದೇವಾಲಯದ ಹೊರಗೆ ಚಿಕ್ಕ ಪುಷ್ಕರಣಿ ಇದೆ. ಇದಕ್ಕೆ ಕಾಶಿ ಹೊಂಡ ಎಂದು ಕರೆಯುವರು. ಚಿಕ್ಕದಾದ ಈ ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದ ನಂತರ ದೊಡ್ಡದಾಗಿರುವ ವಿಷ್ಣು ಪುಷ್ಖರಣಿಯಲ್ಲಿ ಸ್ನಾನ ಮಾಡುವ ಪರಂಪರೆಯನ್ನು ಭಕ್ತರು ಹೊಂದಿದ್ದಾರೆ. ಎರಡೂ ಪುಷ್ಕರಣಿಗಳಲ್ಲಿ ವರ್ಷದುದ್ದಕ್ಕೂ ಗಂಗೆಯನ್ನು ಕಾಣಬಹುದು.

ಮಹಾಕೂಟೇಶ್ವರ ದೇವಾಲಯದ ಸುತ್ತ ಎತ್ತರದ ಬೆಟ್ಟವಿದೆ. ನಿಸರ್ಗ ಸೌಂದರ್ಯದ ಕಂದಕದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಎರಡೂ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆಗಳು ಸದಾ ಚಿಮ್ಮುತ್ತಿವೆ.

ಚಿಕ್ಕ ಪುಷ್ಕರಣಿಯು ಭೂಮಿಯಿಂದ 6 ಅಡಿ ಆಳದಲ್ಲಿದೆ. 4 ಅಡಿ ನೀರು ನಿರಂತರವಾಗಿರುವುದು. ಎರಡೂ ಪುಷ್ಕರಣಿಗಳಲ್ಲಿ 6ನೇ ಶತಮಾನದಿಂದ 21ನೇ ಶತಮಾನದ ವರೆಗೂ ಭರ್ತಿಯಾಗಿ ನಿರಂತರವಾಗಿ ಸಾವಿರಾರು ವರ್ಷಗಳಿಂದ ಕಾಲುವೆ ಮೂಲಕ ನೀರು ಹರಿಯುತ್ತದೆ.

ಕಾಲುವೆ ನೀರನ್ನು ಸುತ್ತಲಿನ ರೈತರ ತೋಟಕ್ಕೆ ಬಳಸಿಕೊಂಡು ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಕಬ್ಬು, ಬಾಳೆ, ತೆಂಗು. ಅಡಿಕೆ, ಮಾವು, ಲಿಂಬೆ, ಶೇಂಗಾ, ಮಸಾಲೆ ಮತ್ತು ಔಷಧಿಯ ಸಸ್ಯ ವೈವಿಧ್ಯಮಯ ಬೆಳೆಯನ್ನು ಬೆಳೆಯುವರು.

‘ನಮ್ಮಜ್ಜನ ತಲೆಮಾರಿನಿಂದ ಮಹಾಕೂಟೇಶ್ವರ ದೇವರಿಗೆ ತಪ್ಪದ ಬರತೀವರಿ. ಹೊಂಡದಾಗ ನೀರು ಒಮ್ಮೆಯೂ ಕಡಿಮಿ ಆಗಿಲ್ಲರಿ ’ ಎಂದು ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಭಕ್ತ ಬಸವರಾಜ ಬಂಗಾರಿ ಸಂತಸ ವ್ಯಕ್ತಪಡಿಸಿದರು.

1500 ವರ್ಷಗಳಿಂದ ಪುಷ್ಕರಣಿಯಲ್ಲಿ ನೀರು ಪುಷ್ಕರಣಿಯಲ್ಲಿ ಚಿಮ್ಮುವ ನೀರಿನ ಬುಗ್ಗೆಗಳು ನೀರಿನಿಂದ ಹಸಿರಾದ ತೋಟ ರೈತರ ಸಂತಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.