ಜಮಖಂಡಿ: ಅತ್ಯಾಧುನಿಕ ತಂತ್ರಜ್ಞಾನದ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಿಸಿಕೊಂಡಿದ್ದ ಸ್ಥಳೀಯ ನಿವಾಸಿ 53 ವರ್ಷದ ಕುಮುದಾ ಉದಪುಡಿ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿ ವೈದ್ಯಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹುಟ್ಟಿದಾಗ ಗಂಡು ಮಗು 1.8 ಕೆಜಿ ತೂಕ ಹೊಂದಿದೆ. 48 ವರ್ಷದೊಳಗಿನ ಮಹಿಳೆಯರಿಗೆ ಅತ್ಯಾಧುನಿಕ ತಂತ್ರಜ್ಞಾನದ ಗರ್ಭಧಾರಣೆ(ಐವಿಎಫ್) ಚಿಕಿತ್ಸೆ ನೀಡಲು ಮಾತ್ರ ಸಾಧ್ಯ. ಆದರೆ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ. ಏಕೆಂದರೆ ಈ ಚಿಕಿತ್ಸೆ ಮಹಿಳೆಗೆ ಮಾರಕವಾಗುವ ಸಾಧ್ಯತೆ ಇದೆ. ಆದರೆ ಕುಮುದಾ ಅತ್ಯಂತ ವಿರಳ ಮಹಿಳೆ ಎಂದು ಪುಣೆಯ ರೂಬಿ ಹಾಲ್ ಕ್ಲಿನಿಕ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಸುನಿತಾ ತಂಡೂಲವಾಡ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಕುಮುದಾ ಅವರಿಗೆ ಮೊದಲು ಬೆನ್ನುನೋವು ಇತ್ತು. ಆ ಕಾರಣಕ್ಕಾಗಿ ಅವರಿಗೆ ಈ ಚಿಕಿತ್ಸೆ ನೀಡಲು ನಿರಾಕರಿಸಲಾಗಿತ್ತು. ಆದರೆ ಬೆನ್ನು ನೋವು ನಿವಾರಿಸಿಕೊಂಡು ಅವರು ಚಿಕಿತ್ಸೆಗೆ ಸಿದ್ಧರಾಗಿದ್ದರು. ಅವರಿಗೆ ಚಿಕಿತ್ಸೆ ನೀಡುವ ಮುನ್ನ ಮಧುಮೇಹ, ರಕ್ತದೊತ್ತಡ, ಹೃದಯರೋಗ ಈ ಎಲ್ಲದಕ್ಕೂ ಸಮಗ್ರ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಚಿಕಿತ್ಸೆಯನ್ವಯ ನೀಡುವ ಇಂಜೆಕ್ಷನ್ ತುಂಬಾ ನೋವು ಉಂಟು ಮಾಡುತ್ತವೆ.

ಆದರೆ ಮಗುವನ್ನು ಪಡೆಯಬೇಕೆಂಬ ಹಂಬಲದಿಂದ ಆ ನೋವು ಕುರಿತು ಕುಮುದಾ ವೈದ್ಯರಿಗೆ ದೂರಲಿಲ್ಲ. ಏಕೆಂದರೆ ಮಕ್ಕಳ ಭಾಗ್ಯ ಇಲ್ಲ ಎಂಬ ಕಾರಣಕ್ಕೆ ಧಾರ್ಮಿಕ ಹಾಗೂ ಕೌಟುಂಬಿಕ ಕಾರ್ಯ ಕ್ರಮಗಳಿಗೆ ಅವರನ್ನು ಯಾರೂ ಆಹ್ವಾನಿಸುತ್ತಿರಲಿಲ್ಲ ಎಂದು ಅವರ ಸಹೋದರಿ ಮಂಜುಳಾ ಹೇಳುತ್ತಾರೆ.

ಸುಮಾರು 32 ವರ್ಷಗಳಿಂದ ಗರ್ಭ ಧರಿಸಿರಲಿಲ್ಲ. ಜಲಗಾಂವ ಸೇರಿದಂತೆ ಹಲವಾರು ಕಡೆಗೆ ಚಿಕಿತ್ಸೆ ಪಡೆದಿದ್ದರೂ ಪ್ರಯೋಜನ ಆಗಿರಲಿಲ್ಲ. ಹಾಗಾಗಿ ಮಗು ಗರ್ಭಕೋಶದಲ್ಲಿ ಬೆಳೆಯುತ್ತಿದ್ದಾಗ ವೈದ್ಯರು ಹೇಳಿದ ಆಹಾರ ಪದ್ಧತಿಯನ್ನು ಚಾಚೂ ತಪ್ಪದೇ ಪಾಲಿಸಿದ್ದರು.

ಮುಖದ ಮೇಲೆ ಕಾಣಿಸಿಕೊಂಡಿದ್ದ ವಯಸ್ಸಿನ ಗೆರೆಗಳು 53 ರ ವಯಸ್ಸಿನಲ್ಲಿ ಹೆರಿಗೆ ಅಸಾಧ್ಯದ ಮಾತು ಎನ್ನಲಾಗಿತ್ತು. ಮಗುವನ್ನು ದತ್ತು ಪಡೆಯಲು ಸೂಚಿಸಲಾಗಿತ್ತು. ಆದರೆ ಈಗ ಆರೋಗ್ಯ ಪೂರ್ಣ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರೂ ಕೂಡ ಆರೋಗ್ಯವಾಗಿದ್ದಾರೆ ಎಂದು ಅವರ ಸಹೋದರಿ ವಿವರಿಸಿದ್ದಾರೆ. ಕುಮುದಾ 56 ವರ್ಷದ ಪತಿ ವಕೀಲ ಎಲ್.ಆರ್. ಉದಪುಡಿ ಅವರಿಗೆ 7 ಜನ ಸಹೋದರರು ಇದ್ದಾರೆ.

ಅವರೆಲ್ಲರಿಗೂ ಮಕ್ಕಳ ಭಾಗ್ಯವಿದೆ. ಆ ಭಾಗ್ಯ ತಂದು ಕೊಟ್ಟ ವೈದ್ಯರನ್ನು ಅಭಿನಂದಿಸುವುದಾಗಿ ಹೇಳಿದರು. ಈ ಹಿಂದೆ ಎರಡು ಬಾರಿ ಇಂತಹ ಪ್ರಯತ್ನ ಮಾಡಲಾಗಿತ್ತು. ಆದರೆ ಯಶಸ್ಸು ದೊರೆತಿರಲಿಲ್ಲ. ಇದು ಮೂರನೇ ಬಾರಿಗೆ ಯಶಸ್ಸು ದೊರೆತಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.