ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ತಮ್ಮ ದಂಡು ದರ್ಬಾರಿನೊಂದಿಗೆ ರಾಜಧಾನಿಯಲ್ಲಿ ತಮ್ಮದೇ ‘ತಂತ್ರಗಾರಿಕೆ’ಯನ್ನು ಹೊಸೆದಿದ್ದು, ಕರ್ನಾಟಕದ ರಾಜಕೀಯದಲ್ಲಿ ಸಂಚಲನಕ್ಕೆ ನಾಂದಿ ಹಾಡಿದೆ.

ಎರಡೂವರೆ ವರ್ಷ ಪೂರ್ಣಗೊಂಡ ಬಳಿಕ ಅಧಿಕಾರ ಹಸ್ತಾಂತರವಾಗಲಿದೆ ಎಂಬ ವದಂತಿಗಳಿಗೆ ಇತಿಶ್ರೀ ಹಾಡುವ ಸಂಕಲ್ಪ ಬಲದೊಂದಿಗೆ ದಿನಬಿಟ್ಟು ದಿನ ಎರಡು ದಿನ ದೆಹಲಿಗೆ ದೌಡಾಯಿಸಿದ್ದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ‘ನವೆಂಬರ್ ಕ್ರಾಂತಿ’ಯ ಗೊಂದಲಗಳಿಗೆ ತೆರೆ ಎಳೆದು, ಅಧಿಕಾರ ಮುಂದುವರಿಕೆ ಕುರಿತು ತಮ್ಮ ಹಕ್ಕನ್ನು ಅವಧಿಪೂರ್ಣವಾಗುವವರೆಗೆ ಪ್ರತಿಷ್ಠಾಪಿಸುವತ್ತ ಮುಂದಡಿಯನ್ನೂ ಇಟ್ಟಿದ್ದಾರೆ.

ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಗಾದಿ ಹಿಡಿದೇ ತೀರಬೇಕೆಂಬ ಛಲ ತೊಟ್ಟಿರುವ ಡಿ.ಕೆ. ಶಿವಕುಮಾರ್, ಕೂಡ ನಾಯಕರ ಮನೆಗೆ ಎಡತಾಕಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ತಮ್ಮ ಆಕಾಂಕ್ಷೆಯನ್ನೂ ತೋಡಿಕೊಂಡರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಗೆ ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ರಾಹುಲ್ ಭೇಟಿಯ ಮಹಾ ನಿರೀಕ್ಷೆಯಲ್ಲಿ ಮಂಗಳವಾರ ಮತ್ತೆ ಇಲ್ಲಿಗೆ ಬರಲಿರುವ ಶಿವಕುಮಾರ್, ಮತ್ತೊಂದು ಸುತ್ತಿನ ಪ್ರಯತ್ನ ಆರಂಭಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಕರ್ನಾಟಕದ ನಾನಾ ಹಕ್ಕೊತ್ತಾಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ರಾಷ್ಟ್ರ ರಾಜಧಾನಿಗೆ ಸೋಮವಾರ ಬಂದಿದ್ದ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು ಒಂದು ಗಂಟೆ ಚರ್ಚಿಸಿದರು. ಪುನರ್ ರಚನೆ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿದರು.

‘ನವೆಂಬರ್ 20ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ಆಗಲಿದೆ. ಹೈಕಮಾಂಡ್ ನಾಯಕರು ಈ ಹಿಂದೆ ಸೂಚಿಸಿದ್ದಂತೆ ಸಂಪುಟ ಪುನರ್ ರಚನೆ ಮಾಡಲು ಈಗ ಸಿದ್ದನಿದ್ದೇನೆ. ಪ್ರಸ್ತುತ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಕನಿಷ್ಠ ಎಂಟು ಅಥವಾ ಗರಿಷ್ಠ 12 ಸಚಿವರನ್ನು ಸಂಪುಟದಿಂದ ಕೈಬಿಡಬಹುದು. ಆಗ ಹಿರಿಯರಿಗೆ ಹಾಗೂ ಹೊಸಬರಿಗೆ ಅವಕಾಶ ನೀಡಬಹುದು’ ಎಂದು ಸಿದ್ದರಾಮಯ್ಯ ಅವರು ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ.

‘ಸಂಪುಟದಲ್ಲಿ ಎಷ್ಟು ಬದಲಾವಣೆ ಮಾಡಬಹುದು, ಯಾರನ್ನು ಕೈಬಿಡಬಹುದು, ಯಾರನ್ನು ಸೇರ್ಪಡೆ ಮಾಡಬಹುದು ಎಂಬ ಬಗ್ಗೆ ಖರ್ಗೆ ಮಾಹಿತಿ ಪಡೆದುಕೊಂಡರು. ರಾಹುಲ್ ಗಾಂಧಿ ಜತೆಗೆ ಸಮಾಲೋಚಿಸಿ ಈ ಬಗ್ಗೆ ತಿಳಿಸುವೆ ಎಂದು ಖರ್ಗೆ ತಿಳಿಸಿದರು’ ಎಂದು ಮೂಲಗಳು ಹೇಳಿವೆ.

‘ಪುನರ್ ರಚನೆಯ ಪ್ರಸ್ತಾಪಕ್ಕೆ ಎಐಸಿಸಿ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನೂ ಕೂರಿಸಿಕೊಂಡು ಸಭೆ ನಡೆಸಿ ತೀರ್ಮಾನಕ್ಕೆ ಬರೋಣ ಎಂದೂ ತಿಳಿಸಿದ್ದಾರೆ’ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ.

ಹೈಕಮಾಂಡ್ ಸೂಚಿಸಿದರೆ ಮುಂದಡಿ: ಸಿ.ಎಂ

‘ಹೈಕಮಾಂಡ್ ನಾಯಕರು ಸೂಚಿಸಿದರೆ ಸಚಿವ ಸಂಪುಟ ಪುನರ್ ರಚನೆ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು. ಖರ್ಗೆ ಭೇಟಿಗೆ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ಅವರು ಎಷ್ಟು ಜನರನ್ನು ಬದಲಾವಣೆ ಮಾಡಬೇಕೆಂದು ಹೇಳಿದರೆ ಅಷ್ಟು ಮಾಡುವೆ. ಈ ಬಗ್ಗೆ ಚರ್ಚಿಸಲು ಖರ್ಗೆ ಅವರನ್ನು ಭೇಟಿ ಮಾಡುತ್ತಿದ್ದೇನೆ’ ಎಂದರು. ‘ಸಚಿವ ಸಂಪುಟ ಪುನರ್ ರಚನೆ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿಲ್ಲ. ಖರ್ಗೆ ಅವರು ಕೇಳಿದರೆ ಮಾತನಾಡುವೆ’ ಎಂದರು. ‘ಸಚಿವ ಸಂಪುಟ ಪುನರ್ ರಚನೆ ಮಾಡುವಂತೆ ನಾಲ್ಕೈದು ತಿಂಗಳ ಹಿಂದೆಯೇ ಹೈಕಮಾಂಡ್ ನಾಯಕರು ಸೂಚಿಸಿದ್ದರು. ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ಬಳಿಕ ಪ್ರಕ್ರಿಯೆ ನಡೆಸುತ್ತೇನೆ ಎಂಬುದಾಗಿ ತಿಳಿಸಿದ್ದೆ. ನವೆಂಬರ್ 20ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದೆ. ಸಚಿವ ಸಂಪುಟಕ್ಕೆ ಸೇರಲು 140 ಶಾಸಕರೂ ಆಕಾಂಕ್ಷಿಗಳು. ಎಲ್ಲರೂ ಸಮರ್ಥರೇ ಇದ್ದಾರೆ’ ಎಂದರು. ‘ಖರ್ಗೆ ಅವರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಿರುವುದು ನನಗೆ ಗೊತ್ತು. ಆದರೆ ಏನು ಮಾತನಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಅವರು ತಿಳಿಸಿದರು.

ಗುಡುಗಿದ ಡಿ.ಕೆ. ಸಹೋದರರು

ಅಧಿಕಾರ ಹಸ್ತಾಂತರ ವಿಷಯದ ಬಗ್ಗೆ ಸ್ಪಷ್ಟತೆ ಸಿಗುವ ಮೊದಲೇ ಸಚಿವ ಸಂಪುಟ ಪುನರ್ ರಚನೆಯತ್ತ ಹೆಜ್ಜೆ ಇಟ್ಟಿರುವ ಸಿದ್ದರಾಮಯ್ಯ ಬಣದ ಬಗ್ಗೆ ಡಿ.ಕೆ. ಶಿವಕುಮಾರ್ ಸಹೋದರರು ಕಿಡಿಕಿಡಿಯಾಗಿದ್ದಾರೆ.

‘ಅವರು (ಸಿದ್ದರಾಮಯ್ಯ ಬಣದವರು) ಈಗ ಆಟ ಆರಂಭಿಸಿದ್ದಾರೆ. ನಾವು ಅದಕ್ಕೆ ಅಂತ್ಯ ಹಾಡುತ್ತೇವೆ ಎಂದು ಸಹೋದರರು ಆಪ್ತರ ಮುಂದೆ ಗುಡುಗಿದ್ದಾರೆ’ ಎಂದು ಗೊತ್ತಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ಸಂಜೆ ಭೇಟಿ ಮಾಡಿದ್ದ ಶಿವಕುಮಾರ್ ಸುದೀರ್ಘವಾಗಿ ಸಮಾಲೋಚಿಸಿದ್ದರು. ‘ಎರಡೂವರೆ ವರ್ಷಗಳ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಅಧಿಕಾರ ಹಸ್ತಾಂತರದ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು. ಅದಕ್ಕೂ ಮುನ್ನ ಪುನರ್ ರಚನೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು ಎಂದು ಮೂಲಗಳು ಖಚಿತಪಡಿಸಿವೆ.

ಸೋಮವಾರ ಮಧ್ಯಾಹ್ನದವರೆಗೆ ಕರ್ನಾಟಕ ಭವನದಲ್ಲಿ ಇದ್ದ ಅವರು ಮುಖ್ಯಮಂತ್ರಿ ಅವರೊಂದಿಗೆ ಊಟದ ಶಾಸ್ತ್ರ ಮುಗಿಸಿ ಬೆಂಗಳೂರಿಗೆ ನಿರ್ಗಮಿಸಿದರು. ಮಂಗಳವಾರ ರಾತ್ರಿ ಪುನಃ ದೆಹಲಿಗೆ ಬರಲಿದ್ದಾರೆ. ಈ ನಡುವೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಶಿವಕುಮಾರ್ ಕಾಲಾವಕಾಶ ಕೇಳಿದ್ದರು. ಆದರೆ ಮಧ್ಯಾಹ್ನದವರೆಗೆ ಕಾದರೂ ರಾಹುಲ್ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ‘ರಾಹುಲ್ ಅವರು ವಿವಿಧ ಸಭೆಗಳಲ್ಲಿ ಭಾಗಿಯಾಗಿರುವುದರಿಂದ ಭೇಟಿ ಮಾಡಲು ಸಾಧ್ಯವಾಗಲಿಲ್ಲ‘ ಎಂದು ಶಿವಕುಮಾರ್ ಆಪ್ತರು ತಿಳಿಸಿದರು.
.ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ: ಸಚಿವ ಆಕಾಂಕ್ಷಿಗಳಿಂದ ಸಿಎಂಗೆ ಅಹವಾಲು.ಏನೇ ತೀರ್ಮಾನವಾದರೂ ಹೈಕಮಾಂಡ್, ಸಿದ್ದರಾಮಯ್ಯ ನಿರ್ಧರಿಸುತ್ತಾರೆ: ಎಂ.ಬಿ. ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.