ಮಂಗಳವಾರ, ಅಕ್ಟೋಬರ್ 4, 2022
27 °C

ಕೆಂಗೇರಿ: ಗರ್ಭಿಣಿಯರಿಗೆ ಬಾಗಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ‘ತಾಯ್ತನ ಮಹಿಳೆಯರ ಬಾಳಿನಲ್ಲಿ ಅತ್ಯಂತ ಸಂತೋಷ ಹಾಗೂ ಮಹತ್ವಪೂರ್ಣವಾದ ಘಟ್ಟ. ಆರೋಗ್ಯ ಪೂರ್ಣ ಮಗುವಿನ ಜನನಕ್ಕೆ ಈ ಅವಧಿಯು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ವಿವಿಧ ಪಂಚಾಯಿತಿಗಳ ವತಿಯಿಂದ ಆಯೋಜಿಸಿದ್ದ ‘ಸೀಮಂತಸಂಭ್ರಮ’ದಲ್ಲಿ ಅವರು ಮಾತನಾಡಿ
ದರು. ‘ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಸೀಮಂತ ಸಂಭ್ರಮದಂತಹ ಕಾರ್ಯಕ್ರಮಗಳನ್ನು ಕ್ಷೇತ್ರದಾದ್ಯಂತ ಹಮ್ಮಿಕೊಳ್ಳಲಾಗಿದೆ’ ಎಂದರು.

ಬಿಜೆಪಿ ಮುಖಂಡ ಚಿಕ್ಕರಾಜು ಮಾತನಾಡಿ, ‘ಪ್ರಸವಪೂರ್ವ ಅವಧಿಯಲ್ಲಿ ಗರ್ಭಿಣಿಯರಿಗೆ ಅಗತ್ಯವಾದ ಪೋಷಕಾಂಶಯುಕ್ತ ಆಹಾರವನ್ನು ಪಂಚಾಯಿತಿ ವತಿಯಿಂದ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

ಸುಮಾರು 900ಕ್ಕೂ ಹೆಚ್ಚು ಗರ್ಭಿಣಿಯರಿಗೆ ಬಾಗಿನ ನೀಡಲಾಯಿತು.

ಮುಖಂಡರಾದ ಭೀಮನಕುಪ್ಪೆ ಮಹೇಶ್, ರಾಮೋಹಳ್ಳಿ ವೇಣುಗೋಪಾಲ್, ಶೋಭಾ ತಿಮ್ಮೇಗೌಡ, ಚೇತನ್, ವಿಜಯ್ ಕುಮಾರ್, ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು