ಸಿರುಗುಪ್ಪ: 'ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮುಚ್ಚುವ ಪರಿಸ್ಥಿತಿ ಬಂದಿದೆ. ಇದರಿಂದ ಕನ್ನಡ ಭಾಷೆ ನಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಶಿವಕುಮಾರ ಬಳಿಗಾರ ಆತಂಕ ವ್ಯಕ್ತಪಡಿಸಿದರು.

ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದ ಸಂಗೀತ ವಿದ್ವಾಂಸ ಶ್ರೀದೊಡ್ಡಬಸವಾರ್ಯ ಗವಾಯಿಗಳ ವೇದಿಕೆಯಲ್ಲಿ ಶನಿವಾರ ನಡೆದ ಸಿರುಗುಪ್ಪ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕರ ಭಾಷಣದಲ್ಲಿ ವೇದಿಕೆ ಉದ್ದೇಶಿಸಿ ಮಾತನಾಡಿದರು.

'ಭಾಷೆಯ ಬಗ್ಗೆ ಅರಿವಿರಬೇಕು. ಬಹುಭಾಷೆಗಳ ಪ್ರಭಾವದಿಂದಾಗಿ ಕನ್ನಡತನವನ್ನು ಕಳೆದುಕೊಳುತ್ತಿದ್ದೇವೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರಬನ್ನಿ' ಎಂದು ಕಿವಿಮಾತು ಹೇಳಿದರು

ಸರ್ಕಾರಿ ನೌಕರರೆಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೇರಿಸಬೇಕು. ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬಂತಾಗಬೇಕು. ಕನ್ನಡಿಗರು ಕನ್ನಡಕ್ಕೆ ನಾನೇನು ಮಾಡಿದೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಿ' ಎಂದು ತಿಳಿಸಿದರು.

'ಸಮಕಾಲೀನ ಪ್ರಪಂಚದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಿಸಿ ಉಳಿಸಬೇಕಾದ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ವಿಜ್ಞಾನ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕನ್ನಡ ಭಾಷಾಭಿವೃದ್ಧಿಗೆ ತಂತ್ರಜ್ಞಾನ ರೂಪಿಸಬೇಕು' ಎಂದು ಆಗ್ರಹಿಸಿದರು.

'ಸಿರುಗುಪ್ಪ ಗಡಿನಾಡಾಗಿ, ಭತ್ತದ ಕಣಜವಾಗಿ, ಸಜ್ಜನರ ನೆಲೆನಾಡಾಗಿ ಹಾಗೂ ವರ ಸಿರಿ, ಜ್ಞಾನ ಸಿರಿ, ಭಕ್ತಿಸಿರಿ , ಕಲಾಸಿರಿ, ನುಡಿಸಿರಿಗಳ 'ಸಿರಿಯ ಕುಪ್ಪೆ' ಆಗಿದೆ' ಎಂದು ಬಣ್ಣಿಸಿದರು.

ಸಿರುಗುಪ್ಪ ತಾಲ್ಲೂಕಿನ ಸಾಹಿತ್ಯಕ, ಕಲೆ ವಾಸ್ತುಶಿಲ್ಪ, ಸಂಗೀತ ಪನಾಟಕ, ಬಯಲಾಟ ಹಾಗೂ ಗಡಿನಾಡಿನ ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಧುಸೂಧನ್ ಕಾರಿಗನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಎಚ್ ವಿಶ್ವನಾಥ 'ಸಿರಿ ಸೌರಭ' ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಅಖಂಡ ಬಳ್ಳಾರಿ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು.

ತಾಲ್ಲೂಕು ಇ ಒ ಪವನ್ ಕುಮಾರ್, ವೃತ್ತ ನಿರೀಕ್ಷಕ ಹನುಮಂತಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಬಸವಭೂಷಣ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ತಾಲ್ಲೂಕು ಆರೋಗ್ಯಾಧಿಕಾರಿ ದಮ್ಮೂರು ಬಸವರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ಹುಚ್ಚೀರಪ್ಪ ಇದ್ದರು.

ಕನ್ನಡಕ್ಕೆ 5ಸಾವಿರ ವರ್ಷಗಳ ಇತಿಹಾಸವಿದೆ : ನಾ ಸೋಮೇಶ್ವರ

'ಕನ್ನಡ ಮತ್ತು ಕನ್ನಡಿಗರಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧೂ ಸರಸ್ವತಿ ಸಂಸ್ಕೃತಿಯ ಕಟ್ಟಿದ ಮಹಾನುಭಾವರು ಕನ್ನಡಿಗರು' ಎಂದು ಚಂದನ ವಾಹಿನಿಯ ಖ್ಯಾತ ನಿರೂಪಕ ಡಾ.ನಾ.ಸೋಮೇಶ್ವರ ತಿಳಿಸಿದರು.

ಸಿಂಧೂ ಸರಸ್ವತಿ ಸಂಸ್ಕೃತಿಯ ಉತ್ಖನನದ ಸಂದರ್ಭದಲ್ಲಿ ದೊರೆತ ಚಿನ್ನಾಭರಣೆಗಲ್ಲಿ ಶೇ 11ರಷ್ಟು ಬೆಳ್ಳಿಯ ಅಂಶವಿತ್ತು. ಇದು ಕೋಲಾರದ ಹಟ್ಟಿ ಚಿನ್ನದ ಗಣಿಯಿಂದ ದೊರೆತ ಇತಿಹಾಸವಿದೆ' ಎಂದು ವಿಶ್ಲೇಷಿಸಿದರು.

ಮಹಾಭಾರತದ ರಾಜಸೂಯ ಯಾಗದ ಸಂದರ್ಭದಲ್ಲಿ ಭೀಷ್ಮ ದಕ್ಷಿಣದ ರಾಜ್ಯಗಳಾದ ಮಹಿಷಕ(ಮೈಸೂರು), ಕುಂತಳ (ಬಳ್ಳಾರಿ), ವನವಾಸಿಕ ( ಬನವಾಸಿ) ಹಾಗೂ ಕರ್ನಾಟಕ (ಉಡುಪಿ) ಗೆಲ್ಲಲು ಯುಧಿಷ್ಠಿರನಿಗೆ ತಿಳಿಸುತ್ತಾನೆ ಎಂದು ಕರ್ನಾಟಕದ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಪ್ರೇಮ ಉಕ್ಕಿಸಿದ 'ವಂದೇ ಮಾತರಂ' ಗೀತೆ ದೇಶವನ್ನು ದೇವಿಯನ್ನಾಗಿ ಮೂರ್ತಿಕರಿಸಿತು. ಇದರಿಂದ ಕುವೆಂಪು ನಾಡಗೀತೆ ರಚಿಸಿ 'ಜಯ ಭಾರತ ಜನನಿಯ ತನುಜಾತೆ' ಎಂದು ಕನ್ನಡ ಇತಿಹಾಸ ಪರಂಪರೆಯ ಸಮೃದ್ಧತೆಯನ್ನು ಕೊಂಡಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.