ಸಂಡೂರು : ‘ಬಿಜೆಪಿಯ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಟಿ.ಪಂಪಾಪತಿಯವರು ಸಂಡೂರು ತಾಲ್ಲೂಕಿನ ಯರ್ರಯ್ಯನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದ ಗ್ರಾವೆಲ್ ನ ಅಕ್ರಮ ಸಾಗಾಣಿಕೆಯ ಆರೋಪವು ಸತ್ಯಕ್ಕೆ ದೂರವಾದುದ್ದು’ ಎಂದು ತಾರಾನಗರ ಗ್ರಾಮದ ನಿವಾಸಿ ಗಡಾದ್ ರಮೇಶ್ ಹೇಳಿದರು.

ಬುಧವಾರ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾವೆಲ್ ಸಾಗಾಣಿಕೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆದು ಕಾನೂನು ಬದ್ದವಾಗಿ ನಡೆಸಲಾಗಿದೆ. ಯಾವುದೇ ಅಕ್ರಮ ನಡೆಸಿಲ್ಲ ಈ ವಿಚಾರವಾಗಿ ಸಂಡೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿ ವಿಚಾರಣೆಯ ಹಂತದಲ್ಲಿದ್ದು, ಈ ವಿಚಾರವಾಗಿ ಅವರುಗಳು ಅನಾವಶ್ಯಕವಾಗಿ ಸುದ್ಧಿಗೋಷ್ಠಿ ನಡೆಸಿ ಪದೇ ಪದೇ ಹೇಳಿಕೆ ನೀಡುವುದು ಖಂಡನಿಯವಾಗಿದೆ. ಅವರುಗಳು ಸಂಡೂರಿನ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದು ಇದೇ ವಿಚಾರದ ಹೇಳಿಕೆಗಳನ್ನು ನೀಡಿದರೇ ಅವರುಗಳ ಮೇಲೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಚ್ಚರಿಕೆ ನೀಡಿದರು.

‘ಸಂಡೂರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರೇ ಈ ಆರೋಪಗಳನ್ನು ಮಾಡುತ್ತೀರುವುದು ಹಾಸ್ಯಸ್ಪದವಾಗಿದ್ದು, ಆರೋಪ ಮಾಡಿರುವ ವ್ಯಕ್ತಿಯೇ ಒಬ್ಬ ರೌಡಿ ಶೀಟರ್ ಆಗಿದ್ದಾರೆ. ಆತನ ವಿರುದ್ಧ ಒಟ್ಟು 18 ಕ್ರಮಿಮಿನಲ್ ಮೊಕದ್ದಮ್ಮೆಗಳು ದಾಖಲಾಗಿವೆ. ಈ ಹಿಂದೆ ಬನ್ನಿಹಟ್ಟಿ ರೈಲ್ವೆಯಾರ್ಡ್ನಲ್ಲಿ ಸುಮಾರು 20 ವರ್ಷಗಳಿಂದ ಲೋಡಿಂಗ್ ವ್ಯವಹಾರ ಮಾಡುತ್ತಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಒಂದು ರೈಲ್ವೆ ರೇಖ್ಗೆ 200 ರಿಂದ 300 ಟನ್ ಅದಿರು ಉಳಿಯುತ್ತದೆ ಎಂದು ತಾವೇ ಹೇಳಿದ್ದಾರೆ. ಆದರೇ ಉಳಿದಿರುವ ಅದಿರುವ ಎಲ್ಲಿ ಸಂಗ್ರಹ ಮಾಡಲಾಗಿದೆ, ಎಲ್ಲಿಗೆ ಕಳ್ಳ ಸಾಗಾಣಿಕೆ ಮಾಡಲಾಗಿದೆ ಇದರ ಬಗ್ಗೆ ಅವರೇ ಲೆಕ್ಕ ನೀಡಬೇಕು ಇಲ್ಲದಿದ್ದರೇ ಈ ಕಳ್ಳ ದಂದೆಯಲ್ಲೆ ಅವರು ಭಾಗಿಯಾಗಿರುವುದು ಖಚಿತವಾಗುತ್ತದೆ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬನ್ನಿಹಟ್ಟಿ ರಂಗಪ್ಪ, ಮಹೇಶ್, ತಿಮ್ಮಪ್ಪ, ಗಂಟೆ ಕುಮಾರಸ್ವಾಮಿ, ಬೊಗರೆಡ್ಡಿ, ಮಾರೆಗೌಡ, ಭರಮರೆಡ್ಡಿ ಜಾರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.