ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಆಫ್ರಿಕಾದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಆಯುಧ ಪ್ರದರ್ಶನ

Published 22 ಮೇ 2024, 15:47 IST
Last Updated 22 ಮೇ 2024, 15:47 IST
ಅಕ್ಷರ ಗಾತ್ರ

ಬಳ್ಳಾರಿ: ಆಫ್ರಿಕಾದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಆಯುಧಗಳ ತ್ರಿಡಿ ತದ್ರೂಪು ಮಾದರಿಗಳನ್ನು ನಗರದ ರಾಬರ್ಟ್ ಬ್ರೂಸ್‍ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ.

‘ಬೋನ್‌ಕ್ಲೋನ್ಸ್’ ಎಂಬ ಅಮೆರಿಕದ ಕಂಪನಿ ರೂಪಿಸಿರುವ ಈ ತ್ರಿಡಿ ತದ್ರೂಪುಗಳನ್ನು ಖ್ಯಾತ ಪ್ರಾಗೈತಿಹಾಸ ತಜ್ಞ  ಪ್ರೊ. ರವಿ ಕೊರಿಶೆಟ್ಟರ್ ಅವರು ಖರೀದಿಸಿ, ವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ.

ವಸ್ತು ಸಂಗ್ರಹಾಲಯದ ನಿರ್ವಹಣಾ ಸಮಿತಿ ಸದಸ್ಯರಾದ ಸಂತೋಷ್ ಮಾರ್ಟಿನ್ ಹಾಗೂ ಎಂ.ಅಹಿರಾಜ ಅವರು ಈ ತ್ರಿಡಿ ಮಾದರಿಯ ಆಕರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಅವರಿಗೆ ನೀಡಿದ್ದು, ಪ್ರದರ್ಶನಕ್ಕೆ ಇರಿಸಲಾಗಿದೆ. 

‘ಜಗತ್ತಿನ ವಿವಿಧ ಭಾಗಗಳಲ್ಲಿ ಸಿಕ್ಕ ಆದಿಮಾನವರ 15 ತಲೆಬುರುಡೆಗಳ ತದ್ರೂಪುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ. ಜನರು, ಪ್ರಮುಖವಾಗಿ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಇವುಗಳನ್ನು ವೀಕ್ಷಿಸಬೇಕು’ ಎಂದು ನಾಗರಾಜ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT