ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಜಿಗಜಿಣಗಿ, ಕಾರಜೋಳ ವಿಜಯಕ್ಕೆ ಸಂಭ್ರಮ

Published 6 ಜೂನ್ 2024, 16:04 IST
Last Updated 6 ಜೂನ್ 2024, 16:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಲೋಕಸಭಾ ಚುನಾವಣೆಯಲ್ಲಿ ಎಸ್.ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ ರಮೇಶ್ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಅವರ ವಿಜಯಕ್ಕೆ ಜಿಲ್ಲಾ ಮಾದಿಗ ಮಹಾ ಸಭಾದ ಕಾರ್ಯಕರ್ತರು ಬುಧವಾರ ಸಂಜೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

ಮಹಾ ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಮಾದಿಗ ಮಹಾ ಸಭಾವು ಪಕ್ಷಾತೀತವಾಗಿ ಮಾದಿಗ ಸಮುದಾಯದ ಮುಖಂಡರನ್ನ ಬೆಂಬಲಿಸುತ್ತೆ. ಹಾಗೆಯೇ ಬಹುಮತದೊಂದಿಗೆ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ನಮ್ಮ ಸಮುದಾಯದವರನ್ನು ಕೇಂದ್ರ ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಶೇಶು, ಎ.ಬಸವರಾಜ್, ರಾಜು, ಮಹಾಂತೇಶ್, ಶ್ರೀನಿವಾಸ್, ಸಿ.ಆರ್.ಭರತ್‍ಕುಮಾರ್, ಕರಿಯಪ್ಪ, ಹನುಮಂತಪ್ಪ, ಮರಿದಾಸ್, ಪಂಪಾಪತಿ, ಮಾರೇಶ, ಮಲ್ಲಪ್ಪ, ಜೆ.ಬಿ.ರಾಘವೇಂದ್ರ, ಓಬಳೇಶ, ರವಿ, ರಾಜೇಶ, ಎರ್ರಿಸ್ವಾಮಿ, ಈರಣ್ಣ, ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT