ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು | ಕ್ರಿಸ್ತಜ್ಯೋತಿ ಚರ್ಚ್: ಗುಡ್ ಫ್ರೈಡೇ ಆಚರಣೆ

Published 29 ಮಾರ್ಚ್ 2024, 14:25 IST
Last Updated 29 ಮಾರ್ಚ್ 2024, 14:25 IST
ಅಕ್ಷರ ಗಾತ್ರ

ಸಂಡೂರು: ಪಟ್ಟಣದ ಕ್ರಿಸ್ತಜ್ಯೋತಿ ಚರ್ಚ್‌ನಲ್ಲಿ ಗುಡ್ ಫ್ರೈಡೇ ಅನ್ನು ಕ್ರೈಸ್ತರು ಶುಕ್ರವಾರ  ಆಚರಿಸಿದರು.

ಚರ್ಚ್‌ಗೆ ಆಗಮಿಸಿ ವಿವಿಧ ಭಕ್ತಿಗೀತೆಗಳ ಮೂಲಕ ಪ್ರಾರ್ಥಿಸಲಾಯಿತು.ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ್ದರ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು ಈ ದಿನ ಉಪವಾಸವಿದ್ದು ಜಗತ್ತಿನ ಒಳಿತಿಗೆ ಪ್ರಾರ್ಥಿಸುವುದು ಸಂಪ್ರದಾಯ ಎಂದು ಚರ್ಚ್ ನ ಫಾದರ್ ವಸಂತ್ ಕುಮಾರ್ ತಿಳಿಸಿದರು.

ಯೇಸುಕ್ರಿಸ್ತರನ್ನು ಶಿಲುಬೆಗೆ ಏರಿಸುವ ಸಂದರ್ಭದಲ್ಲಿ ನಡೆದ ಘಟನೆಗಳ ಸ್ಮರಣೆಗಾಗಿ ಚರ್ಚ್‌ ಆವರಣದಲ್ಲಿನ 14 ಸ್ಥಳಗಳಲ್ಲಿ ಶಿಲುಬೆಯನ್ನು ಹೊತ್ತು ವಿಶೇಷವಾಗಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಕೃಪಾನಿಲಯ ಕಾನ್ವೆಂಟಿನ ಸಿಸ್ಟರ್ ಸಿಸಿಲಿ ಫೆಲಿಕ್ಸ್, ಸಿಸ್ಟರ್ ರೀಟಾ, ಸಿಸ್ಟರ್ ಶೆರ್ಲಿ, ಸಿಸ್ಟರ್ ದೀಪ್ತಿ ಥಾಮಸ್, ಸಿಸ್ಟರ್ ಸಹನಾ, ಕ್ರಿಶ್ಚಿಯನ್ ಸಮುದಾಯದ ಅನೇಕರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT