ಕಂಪ್ಲಿ: ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮೆಟ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಜೆ.ಎನ್. ಗಣೇಶ್ ಅವರ 46ನೇ ಜನ್ಮದಿನವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.

ಬಳಿಕ ಮೆಟ್ರಿ ಪಿಕೆಪಿಎಸ್ ಅಧ್ಯಕ್ಷ ಹೊಸಕೋಟೆ ಜಗದೀಶ್ ಮಾತನಾಡಿ, ‘ರೈತರಿಗೆ ಮುಂಗಾರು, ಹಿಂಗಾರಿನಲ್ಲಿ ತುಂಗಭದ್ರಾ ಕಾಲುವೆ ಕೊನೆ ಅಂಚಿನ ಭೂಮಿಗಳಿಗೆ ನೀರು ತಲುಪಿಸುವಲ್ಲಿ ಶಾಸಕರು ಶ್ರಮವಹಿಸಿದ್ದನ್ನು ಇಡೀ ಕ್ಷೇತ್ರದ ಜನತೆಗೆ ಗಮನಿಸಿದದೆ. ಇಂಥ ಶಾಸಕರನ್ನು ಗುರುತಿಸಿ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ‘ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಮಳೆ ಬರುವುದಿಲ್ಲ, ಗ್ಯಾರಂಟಿ ಯೋಜನೆಗಳಿಂದ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ತೊಂದರೆ ಎದುರಾಗಿದೆ ಎನ್ನುವ ವಿಪಕ್ಷದ ಹೇಳಿಕೆಯಲ್ಲಿ ಹುರುಳಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಮಂಜೂರಾಗಿದೆ. ಜತೆಗೆ ಏತನೀರಾವರಿಗೆ ₹140 ಕೋಟಿ ಮಂಜೂರಾಗಿರುವುದೇ ಸಾಕ್ಷಿ’ ಎಂದು ಸಮರ್ಥಿಸಿಕೊಂಡರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಪ್ರಮುಖರಾದ ಸಿ.ಆರ್. ಹನುಮಂತ, ಹೊನ್ನಳ್ಳಿ ಗಂಗಾಧರ, ಬಿ. ನಾರಾಯಣಪ್ಪ, ಕರಿಬಸವನಗೌಡ, ಜಿ. ಮರೇಗೌಡ, ಜಿ. ಅಂಜಿನಪ್ಪ, ಎಚ್. ಗಂಗಾಧರ, ಕೆ. ರಾಜಪ್ಪ, ಕೆ. ರೇಣುಕಗೌಡ, ಮೆಟ್ರಿ ಜಗದೀಶ್, ಬಳೆ ಮಲ್ಲಿಕಾರ್ಜುನ, ಹಾದಿಮನಿ ಕಾಳಿಂಗವರ್ಧನ, ಬಿ. ಜಾಫರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.