ಸಿರುಗುಪ್ಪ: ತಂತ್ರಜ್ಞಾನ ಬಳಸಿಕೊಂಡು ಕಾನೂನುಬಾಹಿರವಾಗಿ ನಡೆಸುವ ಅಪರಾಧಗಳು ಹೆಚ್ಚಾಗಿವೆ. ಸೈಬರ್ ಅಪರಾಧದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳು ಅಗತ್ಯ ಎಂದು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಆರ್.ಎಚ್. ಹೇಳಿದರು.

ನಗರದ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ವತಿಯಿಂದ ಗುರುವಾರ ಹಮ್ಮಿಕೊಂಡ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೊಬ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಪರಾಧಗಳು ಹೆಚ್ಚಾಗುತ್ತವೆ. ಸೈಬರ್ ಅಪರಾಧ ಮಾಹಿತಿ ಪಡೆದುಕೊಂಡಲ್ಲಿ ಪ್ರಕರಣ ದಾಖಲಿಸಲು ಸಹಾಯವಾಗುತ್ತದೆ. ಒಬ್ಬ ವಕೀಲ ನೂರು ಅಪರಾಧಗಳನ್ನು ತಡೆಯಲು ಸಾಧ್ಯ ಎಂದರು.

ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ ಮಾತನಾಡಿ, ಮೊಬೈಲ್ ಕಳೆದು ತಕ್ಷಣ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಬೇಕು. ಸಾರ್ವಜನಿಕರು ತಮ್ಮ ಬ್ಯಾಂಕಿನ ವೈಯಕ್ತಿಕ ಮಾಹಿತಿಗಳಾದ ಅಕೌಂಟ್ ನಂಬರ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕಾರ್ಡ ಹಿಂಭಾಗದಲ್ಲಿರುವ ಸಿವಿವಿ ನಂಬರ್ ಮತ್ತು 4 ಸಂಖ್ಯೆಯ ಓಟಿಪಿ ನಂಬರಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದರು.

ಸೈಬರ್ ಕ್ರೈಂ ಮೂಲಕ ನೀವು ಹಣವನ್ನು ಕಳೆದುಕೊಂಡಲ್ಲಿ ಕೂಡಲೇ ಸೈಬರ್ ಸಹಾಯವಾಣಿ 1930 ಅಥವಾ 112 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಮಾಹಿತಿ ನೀಡಿದರು.

ಸರರ್ಕಾರಿ ಸಹಾಯಕ ಅಭಿಯೋಜನ ಶಿವರಾಜ ಪಾಟೀಲ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಶಿವಕುಮಾರ ಸ್ವಾಮಿ, ಸಿ.ಪಿ.ಐ ಚಂದನಗೋಪಾಲ, ಪಿಎಸ್ಐ ಪರಶುರಾಮ ಹಾಗೂ ವಕೀಲರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.