ಬಳ್ಳಾರಿ: ಕೇಂದ್ರದ ಬಿಜೆಪಿ ಸರ್ಕಾರವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಹುನ್ನಾರ ನಡೆಸಿರುವುದರಿಂದ ಮಾರ್ಚ್ 24 ರಂದು ಡೊನಾಲ್ಡ್ ಟ್ರಂಪ್ ಗೋಬ್ಯಾಕ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ವಿ.ಎಂ.ಶಿವಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ಆರ್ಥಿಕ ಒಪ್ಪಂದದ ವಿರುದ್ಧ ಕೆಲವು ತಿಂಗಳ ಹಿಂದೆ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಿಂದೆ ಸರಿದಿತ್ತು. ಆದರೆ ಈಗ ಮತ್ತೆ ಒಪ್ಪಂದಕ್ಕೆ ಮುಂದಾಗಿದೆ. ಒಪ್ಪಂದ ಜಾರಿಯಾದರೆ ದೇಶಕ್ಕೆ ವಾರ್ಷಿಕ ಅಂದಾಜು 42 ಸಾವಿರ ಕೋಟಿ ಮೌಲ್ಯದ ಹೈನು, ಕೋಳಿ ಉತ್ಪನ್ನಗಳು, ಟರ್ಕಿಯ ಕೃಷಿ ಉತ್ಪನ್ನಗಳು ಆಮದಾಗುತ್ತವೆ. ಇದರಿಂದ ದೇಶದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಡಿಮೆ ದರದ ಕೋಳಿ ಉತ್ಪನ್ನಗಳು ದೇಶಕ್ಕೆ ಆಮದಾದರೆ ಆಂತರಿಕ ಮಾರುಕಟ್ಟೆಗೆ ಮರಣ ಶಾಸನ ಬರೆದಂತಾಗುತ್ತದೆ. ಹೀಗಾಗಿ ಒಪ್ಪಂದಕ್ಕೆ ಕೇಂದ್ರ ಸಹಿ ಹಾಕಬಾರದು ಎಂದು ಕೋಳಿ ಸಾಕಣೆದಾರರ ಒಕ್ಕೂಟದ ಮುಖಂಡ ಆಗ್ರಹಿಸಿದರು.

'ದೇಶದಲ್ಲಿ ಪ್ರಸ್ತುತ ಕೋಳಿ ಸಾಕಣೆಯು 1 ಲಕ್ಷ ಕೋಟಿ ವಾರ್ಷಿಕ ವಹಿವಾಟು ನಡೆಯುತ್ತದೆ. ಒಪ್ಪಂದದಿಂದ ಈ ವಹಿವಾಟು ಪೂರ್ಣ ಕುಸಿಯುತ್ತದೆ ಎಂದರು.

ರೈತ ಕೃಷಿ ಕಾರ್ಮಿಕರ ಸಂಘಟನೆಯ ಹನುಮಂತಪ್ಪ, ಕರ್ನಾಟಕ ರಾಜ್ಯ ರೈತ ಸಂಘಟನೆಯ ಕೃಷ್ಣಪ್ಪ, ಎಐಡಿಎಸ್ಒ ಗೋವಿಂದ, ತುಂಗಭದ್ರಾ ರೈತ ಸಂಘದ ಪುರುಷೋತ್ತಮಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.