ಬಳ್ಳಾರಿ: ಮೃತರ ಹೆಸರಿನಲ್ಲಿರುವ ಕೃಷಿ ಜಮೀನುಗಳನ್ನು ಅವರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡುವ ಇ–ಪೌತಿ ಖಾತೆ ಆಂದೋಲನಕ್ಕೆ ವೇಗ ನೀಡಲು ಮುಂದಾಗಿರುವ ಬಳ್ಳಾರಿ ಜಿಲ್ಲಾಡಳಿತ ಗ್ರಾಮಗಳ ದತ್ತು ಕಲ್ಪನೆಯನ್ನು ಪರಿಚಯಿಸಿದೆ.

ಜಿಲ್ಲೆಯಲ್ಲಿ ಜಮೀನು ದಾಖಲೆಗಳಿಗೆ ಆಧಾರ್ ಸಂಖ್ಯೆ ಹೊಂದಿಸಿದಾಗ (ಆಧಾರ್ ಸೀಡಿಂಗ್) 43,737 ಸ್ವತ್ತುಗಳು ಮೃತರ ಹೆಸರುಗಳಲ್ಲಿರುವುದು ಕಂಡು ಬಂದಿತ್ತು. ಇದು ಬಳ್ಳಾರಿ ಜಿಲ್ಲೆಯ ಸಂಖ್ಯೆಯಾದರೆ ರಾಜ್ಯದಲ್ಲಿ 4,13,8147 ಸ್ವತ್ತುಗಳು ಮೃತರ ಹೆಸರಲ್ಲಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇ–ಪೌತಿ ಖಾತೆ ಆಂದೋನ ನಡೆಸುವಂತೆ ಸರ್ಕಾರ 2024ರಲ್ಲಿ ಆದೇಶ ಹೊರಡಿಸಿತು.

ಎಲ್ಲ ಜಿಲ್ಲೆಗಳಲ್ಲೂ ಅತ್ಯಂತ ಕಟ್ಟುನಿಟ್ಟಾಗಿ ಆಂದೋಲನ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲೂ ಅಂದೋಲನ ನಡೆಸಲಾಗುತ್ತಿದೆ. ಆದರೂ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿಯಾನ ಹಲವು ಕಡೆಗಳಲ್ಲಿ ಕುಂಟುತ್ತಿದೆ.

ನಿಗದಿತ ಗುರಿ ತಲುಪವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿದ ಬಳ್ಳಾರಿ ಜಿಲ್ಲಾಧಿಕಾರಿ (ಡಿಸಿ), ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ), ಎಲ್ಲಿ ಆಭಿಯಾನ ಕುಂಟುತ್ತಿದೆಯೋ ಅದೇ ಹಳ್ಳಿಗಳನ್ನು ದತ್ತು ಪಡೆದು ಇ–ಪೌತಿ ಖಾತೆ ಆಂದೋಲನಕ್ಕೆ ವೇಗ ನೀಡಿದ್ದಾರೆ.

ಯಾವ ಹಳ್ಳಿಗಳು ದತ್ತು: ಬಳ್ಳಾರಿ ತಾಲ್ಲೂಕಿನ ಮೋಕ, ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು, ಕುರುಗೋಡು ತಾಲ್ಲೂಕಿನ ದಮ್ಮೂರು, ಕೋಳೂರು, ಸಂಡೂರು ತಾಲ್ಲೂಕಿನ ದರೋಜಿ, ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಹಳ್ಳಿ, ಸಿರಿಗೇರಿ ಗ್ರಾಮಗಳನ್ನು ಇಬ್ಬರೂ ಅಧಿಕಾರಿಗಳು ದತ್ತು ಪಡೆದಿದ್ದಾರೆ.

ಏನು ಮಾಡಬೇಕು: ಯಾವ ಜಮೀನುಗಳು ಮೃತರ ಹೆಸರಿನಲ್ಲಿದೆಯೋ ಅವರ ಕುಟುಂಬಸ್ಥರು ಇ–ಪೌತಿ ಖಾತೆ ಆಂದೋಲನದಲ್ಲಿ ಒಂದು ಅರ್ಜಿ ನೀಡಿದರೂ ಸಾಕು, ಲಭ್ಯ ದಾಖಲೆಗಳು, ಲಭ್ಯವಿಲ್ಲದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿರುವ ದಾಖಲೆಗಳನ್ನು ಸೃಜಿಸಿ ಜಿಲ್ಲಾಡಳಿತ ಹೆಸರು ಬದಲಾವಣೆ ಮಾಡಿ ಕೊಡುತ್ತದೆ.

ವಂಶವೃಕ್ಷ, ಮರಣ ಪ್ರಮಾಣ ಪತ್ರಗಳನ್ನು ಸ್ಥಳೀಯ ಮಟ್ಟದ ಅಧಿಕಾರಿಗಳೇ ಮುಂದೆ ನಿಂತು ಮಾಡಿಸಿಕೊಡುತ್ತಾರೆ. ಮರಣ ಪ್ರಮಾಣ ಪತ್ರ ಲಭ್ಯವಾಗದೇ ಹೋದರೆ ಸ್ಥಳೀಯ ಅಧಿಕಾರಿಗಳು ಪಂಚನಾಮೆ ನಡೆಸಿ, ದಾಖಲೆ ಒದಗಿಸಿ ಕೊಡಲಿದ್ದಾರೆ.

ಏನು ಉಪಯೋಗ: ಜಮೀನು ಮೃತರ ಹೆಸರಿನಲ್ಲೇ ಇದ್ದರೆ ಮಾರಾಟ, ಖರೀದಿ, ಸಾಲ, ಕೃಷಿ ನಷ್ಟ ಪರಿಹಾರ ಪಡೆಯುವುದು ಅಸಾಧ್ಯ. ಒಂದು ಬಾರಿ ಖಾತೆ ಬದಲಾವಣೆಯಾದರೆ, ಈ ಕೆಲಸಗಳೆಲ್ಲವೂ ಸಲೀಸಲಾಗಲಿದೆ.

ಖಾತೆ ಬದಲಾವಣೆ ಮಾಡುವಾಗ ವಂಶವೃಕ್ಷದಲ್ಲಿನ ಪ್ರತಿಯೊಬ್ಬ ಸದಸ್ಯರ ಇ–ಕೆವೈಸಿ ಮಾಡಲಾಗುತ್ತದೆ. ಪ್ರತಿಯೊಬ್ಬರಿಂದಲೂ ಒಟಿಪಿ ಪಡೆದು ನಮೂದು ಮಾಡಲಾಗುತ್ತದೆ. ಹೆಣ್ಣುಮಕ್ಕಳನ್ನು ಆಸ್ತಿ ಹಕ್ಕಿನಿಂದ ಹೊರಗಿಡುವ ಹುನ್ನಾರಗಳು ಇದರಿಂದ ತಪ್ಪುತ್ತವೆ. ಅವರ ಆಸ್ತಿ ಹಕ್ಕು ರಕ್ಷಣೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಕಡೆ, ಜಿಲ್ಲಾಡಳಿತವೇ ಇ–ಪೌತಿ ಖಾತೆ ಅಭಿಯಾನ ಮಾಡುತ್ತಿರುವುದರಿಂದ ರೈತರು ಪ್ರತ್ಯೇಕವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅನಿವಾರ್ಯತೆ ದೂರವಾಗಿದೆ. ಜತೆಗೆ, ಲಂಚ ನೀಡಬೇಕಾದ ಸಂಕಷ್ಟವೂ ಇಲ್ಲವಾಗಿದೆ.

ಇ–ಪೌತಿ ಆಂದೋಲನಕ್ಕೆ ವೇಗ ನೀಡುವುದು ಕೆಳ ಹಂತದ ಅಧಿಕಾರಿಗಳಲ್ಲಿ ಹುರುಪು ತುಂಬುವುದು ಗ್ರಾಮ ದತ್ತು ಕಾರ್ಯಕ್ರಮದ ಉದ್ದೇಶ. ಹೆಸರು ಬದಲಾವಣೆಗೆ ಕಾಯುತ್ತಿರುವ ಕುಟುಂಬಗಳು ಮುಂದೆ ಅರ್ಜಿ ಸಲ್ಲಿಸಿ ಆಂದೋಲನದ ಲಾಭ ಪಡೆಯಬೇಕು.
ಮೊಹಮದ್ ಝುಬೇರ ಹೆಚ್ಚುವರಿ ಜಿಲ್ಲಾಧಿಕಾರಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.