ಬಳ್ಳಾರಿ: ನಗರದಲ್ಲಿ ಬಾಲಕಿಯೊಬ್ಬಳಿಗೆ ವಿವಾಹ ಮಾಡಿಸಲಾಗಿದ್ದು, ಐವರ ವಿರುದ್ಧ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅಪ್ತಾಪ್ತಳಿಗೆ ವಿವಾಹ ಮಾಡಿಸಿರುವುದಾಗಿ ಮಕ್ಕಳ ಸಹಾಯವಾಣಿಗೆ ಬಂದಿದ್ದ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಬಾಲಕಿಯ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ ಇನ್ನೂ 17 ವರ್ಷ 11 ತಿಂಗಳು ಮಾತ್ರವೇ ಆಗಿರುವುದು ಬೆಳಕಿಗೆ ಬಂದಿದೆ.

ನಗರದ ಗುಗ್ಗರಹಟ್ಟಿಯ ಸಿದ್ಧಿವಿನಾಯಕ ಕಲ್ಯಾಣ ಮಂಟದಲ್ಲಿ ಸಂದೀಪ್ ಎಂಬಾತನೊಂದಿಗೆ ತನಗೆ ತಂದೆ–ತಾಯಿ ಮದುವೆ ಮಾಡಿಸಿರುವುದಾಗಿ ಬಾಲಕಿಯೂ ಹೇಳಿಕೆ ದಾಖಲಿಸಿದ್ದಾಳೆ ಎನ್ನಲಾಗಿದೆ.

ಸದ್ಯ ಬಾಲಕಿಯ ತಂದೆ–ತಾಯಿ, ವರ ಮತ್ತು ಆತನ ತಂದೆ–ತಾಯಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.