ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ವೇಳೆ ಮ್ಯಾಪಿಂಗ್ ಸಮಸ್ಯೆಗೆ ಪರಿಹಾರ ಹಾಗೂ ಪರಸ್ಪರ ಸ್ಥಳ ಬದಲಾವಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೊಟ್ರೇಶ್ ನಾಯ್ಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ ಮಾತನಾಡಿ, ‘ಶಿಕ್ಷಕರು ಕಾರ್ಯ ನಿರ್ವಹಿಸುವ ಸ್ಥಳದಲ್ಲೇ ಸಮೀಕ್ಷಾ ಕರ್ತವ್ಯ ನಡೆಸಲು ಅವಕಾಶ ಮಾಡಿಕೊಡಬೇಕು. ಸಮೀಕ್ಷೆದಾರರಿಗೂ ಸಮಗ್ರ ಕಿಟ್ ವಿತರಿಸಿ, ಮನೆಗಳ ಪಟ್ಟಿ ಒದಗಿಸಬೇಕು’ ಎಂದರು.

ಸಂಘದ ಖಜಾಂಚಿ ಹೀರ್ಯಾನಾಯ್ಕ, ಉಪಾಧ್ಯಕ್ಷ ಜೆ.ಹನುಮರೆಡ್ಡಿ, ನಿರ್ದೇಶಕರಾದ ದಾದೀಬಿ, ಟಿ. ಸೋಮಶೇಖರ್, ಇಟ್ಟಿಗಿ ಮಂಜುನಾಥ, ದೀಪಿಕಾ, ಸರ್ಕಾರಿ ನೌಕರರಸ ಸಂಘದ ಆಂಜನೇಯ, ಶಿಕ್ಷಕರಾದ ನಾಗರಾಜ, ಮೈಲಾರಪ್ಪ, ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಅಣಜಿ ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.