ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾಂಗಣ: ಸೌಕರ್ಯ ಮರೀಚಿಕೆ

ಹಗರಿಬೊಮ್ಮನಹಳ್ಳಿ: ಅವೈಜ್ಞಾನಿಕ ಕಾಮಗಾರಿಗೆ ಕ್ರೀಡಾಪಟುಗಳ ಬೇಸರ
ಸಿ.ಶಿವಾನಂದ
Published : 15 ಸೆಪ್ಟೆಂಬರ್ 2024, 4:34 IST
Last Updated : 15 ಸೆಪ್ಟೆಂಬರ್ 2024, 4:34 IST
ಫಾಲೋ ಮಾಡಿ
Comments

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ತಾಲ್ಲೂಕು ಕ್ರೀಡಾಂಗಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ಮಾಣಕ್ಕೆ ಕೊಟ್ಯಂತರ ರೂಪಾಯಿ ಅನುದಾನ ವ್ಯಯಮಾಡಿದ್ದರೂ, ವಿವಿಧ ಸೌಕರ್ಯ ಮರೀಚಿಕೆಯಾಗಿದೆ.

ಓಟದ ಟ್ರ್ಯಾಕ್‍ಗಳು ಅವೈಜ್ಞಾನಿಕವಾಗಿವೆ. 400 ಮೀಟರ್‌ ಓಟದ ಟ್ರ್ಯಾಕ್ ಸುತ್ತ ಸಿಮೆಂಟ್ ಕಲ್ಲುಗಳನ್ನು  ಅಳಿವಡಿಸಿದ್ದು, ಟ್ರ್ಯಾಕ್‌ಗೆ ವಿವಿಧ ಮಾದರಿದ ಮಣ್ಣು ಭರ್ತಿ ಮಾಡಿಲ್ಲ. ಇದು ಓಟಗಾರರ ಅಪಾಯ ತಂದೊಡ್ಡುತ್ತದೆ ಎನ್ನುತ್ತಾರೆ ಕ್ರೀಡಾಪಟುಗಳು.

ಟ್ರ್ಯಾಕ್ ಮಧ್ಯೆ ವಾಲಿಬಾಲ್, ಕೊಕ್ಕೊ ಮತ್ತು ಕಬಡ್ಡಿ ಅಂಕಣಗಳನ್ನು ಕ್ರೀಡಾಕೂಟದ ಆಯೋಜಕರು ಪ್ರತಿ ಬಾರಿ ನಿರ್ಮಿಸಿಕೊಳ್ಳಬೇಕಿದೆ. ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿ ಅರ್ಧ ಮಾತ್ರ ನಿರ್ಮಾಣಗೊಂಡಿದೆ.

ಹೊಸ ಗ್ಯಾಲರಿ ಮತ್ತು ಕ್ರೀಡಾಂಗಣದ ಕಚೇರಿಯ ಹಿಂದಿನ ಜಾಗ ಖಾಲಿ ಇದ್ದು, ಅಷ್ಟೂ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರೆ ಒಳಾಂಗಣ ಕ್ರೀಡಾಂಗಣವನ್ನೂ ನಿರ್ಮಿಸಬಹುದಿತ್ತು ಎನ್ನುತ್ತಾರೆ ಕ್ರೀಡಾಪ್ರೇಮಿ ಜಿ. ಪ್ರವೀಣ್‍ಕುಮಾರ್.

‘ಬಟ್ಟೆ ಬದಲಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಕ್ರೀಡಾಪಟುಗಳು ಬಯಲಲ್ಲೇ ಬಟ್ಟೆ ಬಸಲಿಸಬೇಕಾದ ಪರಿಸ್ಥಿತಿ ಇದೆ. ಕ್ರೀಡಾಂಗಣಕ್ಕೆ ಹೊರಗುತ್ತಿಗೆ ಸಿಬ್ಬಂದಿಯೊಬ್ಬರನ್ನು ನೇಮಿಸಲಾಗಿದೆ. ಬೃಹತ್ ಧ್ವಜಸ್ತಂಭದ ನಿರ್ಮಾಣವನ್ನೂ ಕ್ರೀಡಾಂಗಣದಲ್ಲಿ ಮಾಡಲಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ’ ಎಂದರು.  

ಈ ಕುರಿತು ಮಾಹಿತಿ ಪಡೆಯಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಕ್ರೀಡಾಂಗಣದ ಕಚೇರಿ ಹಿಂದೆ ಖಾಲಿ ಬಿಟ್ಟಿರುವ ನಿವೇಶನ
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಕ್ರೀಡಾಂಗಣದ ಕಚೇರಿ ಹಿಂದೆ ಖಾಲಿ ಬಿಟ್ಟಿರುವ ನಿವೇಶನ
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವುದಕ್ಕೆ ನಿರ್ಮಿಸಿರುವ ಗ್ಯಾಲರಿ ಬಳಿ ಬಟ್ಟೆ ಬದಲಿಸಲು ತೆರಳುತ್ತಿರುವ ಕ್ರೀಡಾಪಟುಗಳು
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವುದಕ್ಕೆ ನಿರ್ಮಿಸಿರುವ ಗ್ಯಾಲರಿ ಬಳಿ ಬಟ್ಟೆ ಬದಲಿಸಲು ತೆರಳುತ್ತಿರುವ ಕ್ರೀಡಾಪಟುಗಳು
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಪ್ರೇಕ್ಷಕರು ಕುಳಿತುಕೊಳ್ಳುವ ಹಳೆ ಗ್ಯಾಲರಿ
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಪ್ರೇಕ್ಷಕರು ಕುಳಿತುಕೊಳ್ಳುವ ಹಳೆ ಗ್ಯಾಲರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT