ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಕರ್ನಾಟಕ ಒನ್ ಕೇಂದ್ರ ಉದ್ಘಾಟನೆ

Published 26 ಡಿಸೆಂಬರ್ 2023, 15:16 IST
Last Updated 26 ಡಿಸೆಂಬರ್ 2023, 15:16 IST
ಅಕ್ಷರ ಗಾತ್ರ

ಕೂಡ್ಲಿಗಿ: ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.

ಪಟ್ಟಣದಲ್ಲಿ ನೂತನ ಕರ್ನಾಟಕ ಒನ್ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

5ನೇ ಗ್ಯಾರಂಟಿ ಯುವ ನಿಧಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಅವರು, ವಿದ್ಯಾವಂತ ಯುವಕ, ಯುವತಿಯರ ನೆರವಿಗಾಗಿ ಸರ್ಕಾರ ಯುವ ನಿಧಿ ಯೋಜನೆ ಜಾರಿ ಮಾಡಿದ್ದು, ಎಲ್ಲಾ ಆರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಆನಂತರ ಯುವ ನಿಧಿಗೆ ಆರ್ಜಿ ಸಲ್ಲಿಸಿದ ನಿರಜ ಅವರಿಗೆ ಮೊದಲ ಸ್ವೀಕೃತಿ ಪತ್ರವನ್ನು ವಿತರಿಸಿದರು.

ಮುಖಂಡರಾದ ಬಣವಿಕಲ್ಲು ಎರ್ರಿಸ್ವಾಮಿ, ಮೊರಬ ವೀರಭದ್ರಪ್ಪ, ಕರ್ನಾಟಕ ಒನ್ ಕೇಂದ್ರದ ಗಡ್ಡಿ ವಿಜಯಕುಮಾರ್, ನಿವೃತ್ತ ಶಿಕ್ಷನ ಸಿದ್ದಪ್ಪ, ಮಹೇಶ, ತಿರುಮಲ, ಖಾಜಾ ಹುಸೇನ್, ನರಸಿಂಹಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT