ಬಳ್ಳಾರಿ: ‘ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್ ವಿರುದ್ಧ ಕಾನೂನಿನಡಿ ಕ್ರಮ ತೆಗೆದುಕೊಂಡಿದ್ದು, ಬಂದ್ ಆದೇಶ ಈಗಲೂ ಜಾರಿಯಲ್ಲಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.

‘ಜಾಲಿವುಡ್ ಸ್ಟುಡಿಯೊ ಬಂದ್ ಆಗಿದೆ. ಬಹುಜನರ ಬೇಡಿಕೆ, ಸ್ಥಳೀಯ ನಾಯಕರು ಮತ್ತು ಜನರ ಭಾವನೆಗೆ ಸ್ಪಂದಿಸಲು ಉಪ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಾರೆ. ಜಾಲಿವುಡ್ನ ಒಟ್ಟು 30 ಎಕರೆ ಪ್ರದೇಶದಲ್ಲಿ ಬಿಗ್ಬಾಸ್ ಮನೆ ಒಂದು ಭಾಗ ಮಾತ್ರ. ಜಾಲಿವುಡ್ ವಿರುದ್ಧ ಕೈಗೊಂಡ ಕ್ರಮಕ್ಕೆ ತೊಂದರೆ ಆಗದಂತೆ ಜಿಲ್ಲಾಡಳಿತ ಮತ್ತು ಸರ್ಕಾರ ನಡೆದುಕೊಳ್ಳುತ್ತಿದೆ’ ಎಂದು ಹೇಳಿದರು.

‘ನಾನು ಮಂಡಳಿ ಅಧ್ಯಕ್ಷನಾದ ಬಳಿಕ 150ಕ್ಕೂ ಹೆಚ್ಚಿನ ಕಾರ್ಖಾನೆಗಳ ವಿರುದ್ಧ ಸ್ಥಗಿತ ಆದೇಶ ನೀಡಿದ್ದೇನೆ. ಈ ಆದೇಶಗಳನ್ನು ಪ್ರಶ್ನಿಸಲು ಕಾರ್ಖಾನೆಯವರಿಗೆ ಸಾಧ್ಯವಾಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.