ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಅವರು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ಕ್ಕೆ ಪ್ರತಿನಿಧ್ಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವರು ಸಜ್ಜಾಗಿದ್ದಾರೆ. ಕೆಎಂಎಫ್ನ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಬಯಸಿದ್ದ ಮಾಜಿ ಶಾಸಕ ಭೀಮ ನಾಯ್ಕ ಅವರ ಆಸೆ ನುಚ್ಚು ನೂರಾಗಿದೆ.

ರಾಬಕೊವಿಯ ಆಡಳಿತ ಮಂಡಳಿ ಸಭೆ ಬಳ್ಳಾರಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆಯಿತು. ಒಕ್ಕೂಟದಿಂದ ಕೆಎಂಎಫ್ಗೆ ಡೆಲಿಗೇಷನ್ ಕಳುಹಿಸುವ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಇದನ್ನು ನಿರ್ದೇಶಕ ಭೀಮ ನಾಯ್ಕ ವಿರೋಧಿಸಿದರು ಎಂದು ಹೇಳಲಾಗಿದೆ.

‘ಅಧ್ಯಕ್ಷ ಸ್ಥಾನ ನಿಮಗೆ (ರಾಘವೇಂದ್ರ ಹಿಟ್ನಾಳ) ನೀಡಲಾಗಿದೆ. ಕೆಎಂಎಫ್ ಡೆಲಿಗೇಷನ್ ನನಗೆ ನೀಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಅವರು ಕರೆ ಮಾಡಿ ಮಾತನಾಡಿದ್ದಾರೆ. ವಿಷಯವನ್ನು ಮುಂದೂಡುವಂತೆ ತಿಳಿಸಿದ್ದಾರೆ’ ಎಂದು ಭೀಮ ನಾಯ್ಕ ಸಭೆಯಲ್ಲಿ ಆಗ್ರಹಿಸಿದರು ಎಂದು ಗೊತ್ತಾಗಿದೆ.

‘ವಾರದ ಹಿಂದೆಯೇ ವಿಷಯ ಸೂಚಿಯನ್ನು ನೀಡಲಾಗಿದೆ. ಅದರಲ್ಲಿ ಡೆಲಿಗೇಷನ್ ನೀಡುವ ವಿಷಯವೂ ಇತ್ತು. ಆಗ ಸುಮ್ಮನಿದ್ದು ಈಗ ಏಕಾಏಕಿ ಸಭೆಯಲ್ಲಿ ವಿಷಯ ಮುಂದೂಡುವಂತೆ ಹೇಳಲಾಗದು. ಜತೆಗೆ, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಯಾರ ಬಳಿಯೂ ಮಾತನಾಡಿಲ್ಲ. ಚುನಾವಣೆಗೂ ಮೊದಲು ಈ ವಿಷಯ ಚರ್ಚೆಯಾಗಿಲ್ಲ’ ಎಂದು ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷ ಎನ್. ಸತ್ಯನಾರಾಯಣ ಹೇಳಿದರು ಎಂದು ತಿಳಿದುಬಂದಿದೆ.

ಕಡೆಗೆ ವಿಷಯವನ್ನು ಮತಕ್ಕೆ ಹಾಕಲಾಯಿತು. ಒಟ್ಟು 17 ನಿರ್ದೇಶಕರ ಪೈಕಿ ಸಭೆಯಲ್ಲಿದ್ದ 16 ನಿರ್ದೇಶಕರು ಹಾಜರಿದ್ದರು. ಇದರಲ್ಲಿ 12 ಮಂದಿ ಕೈ ಎತ್ತುವ ಮೂಲಕ ರಾಜಶೇಖರ ಹಿಟ್ನಾಳ ಅವರಿಗೆ ಬೆಂಬಲ ಸೂಚಿಸಿದರು. 4 ಮಂದಿ ಮಾತ್ರ ಭೀಮ ನಾಯ್ಕೆ ಅವರ ಪರವಾಗಿ ನಿಂತರು. ಇದರೊಂದಿಗೆ ಕೆಎಂಎಫ್ಗೆ ಡೆಲಿಗೇಷನ್ ಪಡೆಯುವ ಮತ್ತು ಅಧ್ಯಕ್ಷರಾಗುವ ಭೀಮ ನಾಯ್ಕ ಆಕಾಂಕ್ಷೆ ಹುಸಿಯಾಯಿತು.

ಸಭೆಯ ಪ್ರಮುಖಾಂಶಗಳು: ಒಕ್ಕೂಟದ ವ್ಯಾಪ್ತಿಗೆ ಒಳಪಡುವ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 200 ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಪೈಕಿ ಬಳ್ಳಾರಿಯಲ್ಲಿ 47, ರಾಯಚೂರಿನಲ್ಲಿ 68, ಕೊಪ್ಪಳದಲ್ಲಿ 70 ಮತ್ತು ವಿಜಯನಗರ ಜಿಲ್ಲೆಗೆ 15 ಸಂಘಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಗೊತ್ತಾಗಿದೆ.

ಜೈವಿಕ ಅನಿಲ ಸ್ಥಾವರ ಸ್ಥಾಪಿಸಿಕೊಳ್ಳುವ ರೈತರಿಗೆ ಶೇ.33 ರಷ್ಟು ಸಬ್ಸಿಡಿ ಕೊಡಿಸಲು ನಿರ್ಧರಿಸಲಾಯಿತು. ತುಂಗಭದ್ರಾ ಜಲಾಶಯದಿಂದ ಈ ಬಾರಿ ಒಂದೇ ಬೆಳೆಗೆ ನೀರು ಸಿಗುತ್ತಿರುವುದರಿಂದ ಮೇವು ಮತ್ತು ಹುಲ್ಲಿನ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಲಾಯಿತು.

ಈ ಭಾಗದವರೇ ಕೆಎಂಎಫ್ ಅಧ್ಯಕ್ಷರಾದರೆ ಒಕ್ಕೂಟ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಿರ್ಧಾರವೇ ಅಂತಿಮ.
ರಾಘವೇಂದ್ರ ಹಿಟ್ನಾಳ ರಾಬಕೊವಿ ಅಧ್ಯಕ್ಷ

ಮೆಗಾ ಡೇರಿಗೆ ಶೀಘ್ರ ಡಿಪಿಆರ್

ಆಡಳಿತ ಮಂಡಳಿ ಸಭೆಗೂ ಮೊದಲು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ‘ಅತಿ ಶೀಘ್ರದಲ್ಲೇ ಡೇರಿಯ ವಿವರವಾದ ಯೋಜನಾ ವರದಿ (ಡಿಪಿಆರ್)ಅನ್ನು ಕೆಎಂಎಫ್ ಮೂಲಕ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮಕ್ಕೆ (ಕೆಎಂಇಆರ್ಸಿ) ಸಲ್ಲಿಸಲಾಗುವುದು. ಹಿಂದೆ ₹80 ಕೋಟಿಗೆ ಡಿಪಿಆರ್ ಸಿದ್ಧವಾಗಿತ್ತು. ಈಗ ₹140 ಕೋಟಿಗೆ ಡಿಪಿಆರ್ ಸಲ್ಲಿಸಲಾಗುವುದು’ ಎಂದರು. ನಂದಿನಿ ಉತ್ಪನ್ನಗಳ ಗುಣಮಟ್ಟ ಮಾರುಕಟ್ಟೆ ವಿಸ್ತರಣೆ ಹಾಲು ಉತ್ಪಾದನೆ ವಿಷಯವಾಗಿ ಮಂಡಳಿಯು ಗಂಭೀರವಾಗಿದೆ. ತೆಲಂಗಾಣಕ್ಕೆ ಹಾಲು ಪೂರೈಸಲು ತಡೆಯಾಜ್ಞೆ ಇದೆ. ವಿಷಯ ನ್ಯಾಯಾಲಯದ ಅಂಗಳದಲ್ಲಿದ್ದು ಸಮರ್ಥವಾಗಿ ವಾದ ಮಂಡಿಸಲಾಗುತ್ತಿದೆ. ನಾನು ಅಧ್ಯಕ್ಷನಾದ ಬಳಿಕ ಬಳ್ಳಾರಿಯಲ್ಲಿ ಹಾಲು ಉತ್ಪಾದಕ ಸಂಘಗಳ ಸಂಖ್ಯೆ ಹೆಚ್ಚಾಗಿದೆ. ಹಾಲು ಉತ್ಪಾದನೆಯೂ ಹೆಚ್ಚಾಗಿದೆ. ಕೆಎಂಇಆರ್ಸಿಯಿಂದ ಬಳ್ಳಾರಿ ಸಂಡೂರಿನಲ್ಲಿ ಆಕಳು ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ನಿಯಮಗಳನ್ನು ರೂಪಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.