ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದ ತುಕಾರಾಂ ವಿರುದ್ಧ ಕಾನೂನು ಹೋರಾಟ: ಅಗರವಾಲ್‌ 

Published : 11 ಸೆಪ್ಟೆಂಬರ್ 2024, 16:01 IST
Last Updated : 11 ಸೆಪ್ಟೆಂಬರ್ 2024, 16:01 IST
ಫಾಲೋ ಮಾಡಿ
Comments

ಸಂಡೂರು(ಬಳ್ಳಾರಿ): ‘ವಾಲ್ಮೀಕಿ ನಿಗಮದ ಹಣ ಲೋಕಸಭೆ ಚುನಾವಣೆಯಲ್ಲಿ ದುರ್ಬಳಕೆಯಾಗಿದೆ. ಬಳ್ಳಾರಿ ಕ್ಷೇತ್ರದ ಸಂಸದ ಇ.ತುಕರಾಂ ಸದಸ್ಯತ್ವ ರದ್ದತಿಗೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಕೋರ್ಟ್ ಮೊರೆ ಹೋಗುವರು’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರವಾಲ್ ತಿಳಿಸಿದರು.

ಸಂಡೂರಿನಲ್ಲಿ ಬುಧವಾರ ನಡೆದ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತ್ತು ಸದಸ್ಯತಾ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.

‘ನಿಗಮದ ಹಗರಣ ಕುರಿತು ಜಾರಿ ನಿರ್ದೇಶನಾಲಯ ಕೋರ್ಟ್‌ಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ನಿಗಮದ ₹20.19 ಕೋಟಿ ಹಣ ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೂಲಕ ಬಳ್ಳಾರಿಗೆ ಬಂದಿದ್ದು ಚುನಾವಣೆಯಲ್ಲಿ ಬಳಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದು ಅಕ್ರಮವಾಗಿದೆ’ ಎಂದರು.

‘ಹಿಂದೆ ಇಂದಿರಾಗಾಂಧಿ ಅವರು ಅಧಿಕಾರ ದುರ್ಬಳಕೆ ಮಾಡಿ, ಗೆದ್ದಿದ್ದರು. ನಂತರ ಅವರ ಸದಸ್ಯತ್ವವನ್ನು ಹೈಕೋರ್ಟ್ ರದ್ದುಪಡಿಸಿತ್ತು. 1977ರ ಮನಸ್ಥಿತಿ ಕಾಂಗ್ರೆಸ್‌ನಲ್ಲಿ ಇಂದಿಗೂ ಇದೆ’ ಎಂದೂ ಹೇಳಿದರು. 

‘ಶ್ರೀರಾಮುಲು ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಆಕಾಂಕ್ಷಿ ಅಲ್ಲ. ಅವರು ಮುಂದಿನ ಎರಡು ತಿಂಗಳಲ್ಲಿ ಸಂಸದರಾಗುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT