ಹರಪನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ಕೌನ್ಸಿಲ್ ಸಭೆ ಮಂಜೂರಾತಿ ನಿರೀಕ್ಷಣೆ ಮೇರೆಗೆ ಹಿಂದಿನ ಸಾಮಾನ್ಯ ಸಭೆಗಳಲ್ಲಿ ಅನುಮೋದಿಸಿದ್ದ ವಿವಿಧ ಏಕ ನಿವೇಶನಗಳಿಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂಧ ಸ್ಥಿರೀಕರಣಕ್ಕೆ ಅನುಮತಿಸಲಾಯಿತು.

ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಫಾತೀಮಾಬೀ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸದಸ್ಯರು ನಿರ್ಣಯ ಕೈಗೊಂಡರು. ಸರ್ವೆ ನಂಬರ್ 542/2, ಸರ್ವೆ ನಂಬರ್ 157/ಇ, 157/2, 145/ಎಚ್ ನಲ್ಲಿ ತಲಾ 0.13 ಸೆಂಟ್ಸ್ ವಿಸ್ತೀರ್ಣದ ಏಕ ನಿವೇಶನ, ಸರ್ವೆ ನಂಬರ್ 76/3. 76/1ರಲ್ಲಿ ತಲಾ 0.51 ಸೆಂಟ್ಸ್ ಏಕ ನಿವೇಶನಗಳಲ್ಲಿ ಸ್ಥಿರೀಕರಣಗೊಳಿಸಲು ಸಭೆ ಸಮ್ಮತಿಸಿತು.

ಅಂತಿಮ ಹಂತದ ವಸತಿ ವಿನ್ಯಾಸಕ್ಕೆ ಬಂದಿರುವ ಸರ್ವೆ ನಂಬರ್ 347/ಬಿ2, 347/ಎ2ರಲ್ಲಿ 1.33 ಎಕರೆ ಹಾಗೂ 1.71 ಎಕರೆ ಹಾಗೂ ಸರ್ವೆ ನಂಬರ್ 191/ಎ/1ಬಿರಲ್ಲಿ 1.82 ಎಕರೆ ಹಾಗೂ ಸರ್ವೆ ನಂಬರ್ 587/ಬಿರಲ್ಲಿ 3.61 ಎಕರೆ ವಸತಿ ವಿನ್ಯಾಸಗಳಿಗೆ ಒಪ್ಪಿಗೆ ನೀಡಿತು.

ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ‘ಐಬಿ ವೃತ್ತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಪುರಸಭೆ ಕೌನ್ಸಿಲ್ ಸಭೆಗೆ ಎಂ.ಪಿ.ರವೀಂದ್ರ ಭವನ ಎಂದು ನಾಮಕರಣ ಮಾಡಲು ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದು ಸಭೆ ಗಮನಕ್ಕೆ ತಂದಾಗ ಸಭೆ ಸ್ಥಿರೀಕರಣಕ್ಕೆ ಒಪ್ಪಿಗೆ ಸೂಚಿಸಿತು. ನ್ಯಾಯಾಲಯದ ಆವರಣದಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ನಿರ್ಧರಿಸಲಾಯಿತು.

ಸದಸ್ಯ ಜಾಕೀರ್ ಹುಸೇನ್, 27 ವಾರ್ಡ್ಗಳಿಗೆ ತಲಾ 1 ಹೈಮಾಸ್ಟ್ ದೀಪ ಅಳವಡಿಸಲು ಮನವಿ ಮಾಡಿದರು. ಇದಕ್ಕೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಜನವಸತಿ ಪ್ರದೇಶಗಳಲ್ಲಿ ಅಳವಡಿಸಲು ಕೆಕೆಆರ್ಡಿಬಿಯಲ್ಲಿ ಅವಕಾಶವಿದ್ದು, ಶಾಸಕರ ಬಳಿ ಅನುದಾನಕ್ಕೆ ಬೇಡಿಕೆ ಇಡುವುದಾಗಿ ಪ್ರತಿಕ್ರಿಯಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳಿಗೆ ₹ 3.40 ಲಕ್ಷ ವೆಚ್ಚದಲ್ಲಿ ಬೆಡ್ ಪೂರೈಸುವ ಟೆಂಡರ್ಗೆ ಅನುಮೋದಿಸಿದರು. ಸಭೆಯಲ್ಲಿ ಹಾಜರಿದ್ದ ನಾಮನಿರ್ದೇಶಿತ ಸದಸ್ಯರು ಮಾಸಿಕ ಗೌರವಧನಕ್ಕೆ ಬೇಡಿಕೆ ಸಲ್ಲಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್, ಸದಸ್ಯರಾದ ಇಜಂತಕರ್ ಮಂಜುನಾಥ, ಗೊಂಗಡಿ ನಾಗರಾಜ್, ಗಣೇಶ್, ಹನುಮವ್ವ, ಲಕ್ಕಮ್ಮ, ಶೋಭಾ, ಜಾವಿದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.