ಮರಿಯಮ್ಮನಹಳ್ಳಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಬುಧವಾರ ಸಮೀಪದ ಎಸ್ಎಲ್ಆರ್ ಮೆಟಾಲಿಕ್ಸ್ ಕಂಪನಿಯು ವಿದ್ಯಾರ್ಥಿ ಮಿತ್ರ ಯೋಜನೆಯಡಿಯಲ್ಲಿ ₹2.21ಲಕ್ಷ ಮೌಲ್ಯದ ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

ಪಿಎಸ್ಐ ರಾಮಕೃಷ್ಣನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸಲು ಇಂತಹ ದಾನಿಗಳು ಮುಂದಾಗಿರುವುದು ಶ್ಲಾಘನೀಯ. ಕಂಪನಿಯು ನೀಡಿದ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸುಲಭಗೊಳಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗಲಿದೆ ಎಂದರು.

ಕಂಪನಿಯ ಅಧಿಕಾರಿ ದೀಪಕ್ ಬೆಳ್ಳೂರು ಮಾತನಾಡಿ, ‘ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಮೂಲ ಎಂಬಂತೆ, ಕಂಪನಿಯು ಸದಾ ಸಮಾಜಮುಖಿ ಚಟುವಟಿಕೆಗಳಿಗೆ ಬದ್ಧವಾಗಿದ್ದು, ವಿದ್ಯಾರ್ಥಿ ಮಿತ್ರ ಯೋಜನೆ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಕಂಪನಿಯ ಅಧಿಕಾರಿ ಸಂಜೀಪ ಪತ್ತಾರ್, ಪ್ರಾಂಶುಪಾಲೆ ರೂಪಾ ಪಿ.ಸಿ ಮಾತನಾಡಿದರು. ಕಂಪನಿಯ ಅಧಿಕಾರಿಗಳಾದ ಕೆ.ಮಲ್ಲಿಕಾರ್ಜುನ್, ಮಾರುತಿ ಗೋಸಿ, ಪ್ರಾಧ್ಯಪಕರಾದ ದೊಡ್ಡಮನಿ ಲೋಕರಾಜ್, ಸೈಯದ್ ಉಸ್ಮಾನ್, ವಿಜಯಕುಮಾರ್, ಎರಿಸ್ವಾಮಿ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.