ಮೋತಿ ವೃತ್ತದ ಆರ್‌ಒಬಿ ಅಗಲೀಕರಣ ಅತ್ಯಗತ್ಯ. ಇದರ ಬಗ್ಗೆ ರೈಲ್ವೆ ಹೋರಾಟಗಾರರು ಹಲವುಬಾರಿ ಮನವಿ ಮಾಡಿದ್ದೇವೆ. ಸರ್ಕಾರ ಅಗತ್ಯವಿರುವ ಹಣ ಠೇವಣಿ ಇಟ್ಟು ಆದಷ್ಟು ಬೇಗ ಸೇತುವೆ ನಿರ್ಮಿಸಲು ಮುಂದಡಿ ಇಡಬೇಕು.
– ಮಹೇಶ್ವರ ಸ್ವಾಮಿ, ಮುಖಂಡರು, ರೈಲ್ವೆ ಕ್ರಿಯಾ ಸಮಿತಿ, ಬಳ್ಳಾರಿ
ಈ ಬಗ್ಗೆ ನಾನು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಕೆಎಂಇಆರ್‌ಸಿ ಅನುದಾನದಲ್ಲಿ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಶೀಘ್ರವೇ ಮೋತಿ ರೈಲ್ವೆ ಸೇತುವೆ ವಿಸ್ತರಣೆಯಾಗಲಿದೆ.