ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ | ಪೊಲೀಸರ ಕರ್ತವ್ಯಕ್ಕೆ ಅಡ್ಡಿ; 16 ಜನರ ವಿರುದ್ಧ ಪ್ರಕರಣ ದಾಖಲು

Published 21 ಆಗಸ್ಟ್ 2023, 14:31 IST
Last Updated 21 ಆಗಸ್ಟ್ 2023, 14:31 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದವರನ್ನು ಇಟ್ಟಿಗಿ ಪೊಲೀಸರು ಭಾನುವಾರ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುವಾಗ ಗ್ರಾಮದ ಕೆಲವರು ವಾಹನ ಅಡ್ಡಗಟ್ಟಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ 16 ಜನರ ವಿರುದ್ಧ ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಿರತರ ಮೇಲೆ ಪೊಲೀಸರು ದಾಳಿ ನಡೆಸಿ, 9 ಜನರನ್ನು ಖಾಸಗಿ ವಾಹನದಲ್ಲಿ ಠಾಣೆಗೆ ಕರೆದೊಯ್ತುತ್ತಿದ್ದರು. ಈ ವೇಳೆ ಗಡ್ಡಿ ಬಸವರಾಜ, ಜಯಪ್ಪ, ಕಪ್ಲಿ ಬಸಣ್ಣ ಇತರರು ವಾಹನ ಅಡ್ಡಗಟ್ಟಿ, ಕರ್ತವ್ಯದಲ್ಲಿದ್ದ ಪೊಲೀಸರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜೂಜಾಟದಲ್ಲಿ ತೊಡಗಿದ್ದ ಕಪ್ಲಿ ಬಸಣ್ಣ, ಪಿ.ಪರಮೇಶ, ಎನ್.ಈಶಪ್ಪ, ಯು.ಈಶಪ್ಪ, ಪಿ.ವಿಜಯ, ಕಪ್ಲಿ ವೀರೇಶ, ತೌಡೂರು ಸುರೇಶ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT