ಕುರುಗೋಡು: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೆರೆಯ ತಾಲ್ಲೂಕುಗಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳು ಮಾಯವಾಗಿ ಗುಂಡಿಗಳು ವಿಜೃಂಭಿಸುತ್ತಿವೆ.

ಈ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಬಸ್, ಲಾರಿ, ಕಾರು ಚಾಲಕರು ರಸ್ತೆಯನ್ನು ಹುಡುಕಿಕೊಂಡು ಚಾಲನೆ ಮಾಡುವ ಪರಿಸ್ಥಿತಿ ಇದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಇದೇ ಚಿತ್ರಣ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಕಂಪ್ಲಿ ತಾಲ್ಲೂಕಿನ ಹಳೇ ನೆಲ್ಲುಡಿ ಕ್ರಾಸ್ನಿಂದ ಕುರುಗೋಡು ತಾಲ್ಲೂಕಿನ ಗುತ್ತಿಗನೂರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಹಾಳಾಗಿದೆ. ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತದೆ.

ಕುರುಗೋಡು ತಾಲ್ಲೂಕಿನ ಸಿದ್ದಮ್ಮನಹಳ್ಳಿಯಿಂದ ಸಂಡೂರು ವಿಧಾನಸಭಾ ಕ್ಷೇತ್ರದ ಏಳುಬೆಂಚಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚರಿಸುವ ಜನರು ನರಕಯಾತನೆ ಎದುರಿಸುವಂತಾಗಿದೆ. ರಸ್ತೆ ಮಾಯವಾಗಿ ಮೊಣಕಾಲುದ್ದದ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ಸಂಗ್ರಹವಾಗುತ್ತವೆ. ರಸ್ತೆಯ ಎರಡೂ ಬದಿಯಲ್ಲಿ ದಟ್ಟವಾದ ಮುಳ್ಳುಗಂಟಿಗಳು ಬೆಳೆದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಈ ದುರ್ಗಮ ರಸ್ತೆಯಲ್ಲಿಯೇ ಸಿದ್ದಮ್ಮನಹಳ್ಳಿ ಗ್ರಾಮದ ವಿದ್ಯಾರ್ಥಿಗಳು 3 ಕಿ.ಮೀ. ದೂರ ಕ್ರಮಿಸಿ ಪ್ರೌಢಶಾಲೆಗೆ ತಲುಪಬೇಕಾದ ಸ್ಥಿತಿ ಇದೆ.

ಕುರುಗೋಡು ಪಟ್ಟಣದಿಂದ ಗೆಣಿಕೆಹಾಳು, ಕ್ಯಾದಿಗೆಹಾಳು ಮಾರ್ಗವಾಗಿ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ರಸ್ತೆಯ ಮಧ್ಯದಲ್ಲಿ ಮೂರುಕಡೆ ಹರಿಯುವ ಹಳ್ಳಕ್ಕೆ ನಿರ್ಮಿಸಿರುವ ಕಿರು ಸೇತುವೆಗಳು ಸಂಪೂರ್ಣ ಹಾಳಾಗಿವೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ಹರಿಯುವುದರಿಂದ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ನೂರಾರು ರೈತರು ಜೀವ ಕೈಯಲ್ಲಿಟ್ಟುಕೊಂಡು ಇದೇ ರಸ್ತೆಯಲ್ಲಿ ಕೃಷಿ ಚಟುವಟಿಕೆಗೆ ತಮ್ಮ ಜಮೀನಿಗಳಿಗೆ ಸಂಚರಿಸಬೇಕಾದ ಅನಿವಾರ್ಯತೆ ತಲೆದೂರಿದೆ.

ಕುರುಗೋಡು ಪಟ್ಟಣದಿಂದ ಬಾದನಹಟ್ಟಿ, ಯರಿಗಂಳಿಗಿ, ಬಳ್ಳಾರಿಗೆ ಸಂಪರ್ಕಿಸುವ ರಸ್ತೆಯ ನಿರ್ಮಾಣವೂ ಅರೆಬರೆಯಾಗಿದೆ. ಈ ರಸ್ತೆಯಲ್ಲಿ ಅನೇಕ ವಾಹನ ಸವಾರರು ಬಿದ್ದು ಮೃತಪಟ್ಟ ಘಟನೆಗಳು ಜರುಗಿವೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಗರಪ್ರದೇಶಗಳಿಗೆ ಸೀಮಿತವಾಗಿದ್ದಾರೆ. ಗ್ರಾಮೀಣ ಭಾಗದ ಜನರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮರೆತಿದ್ದಾರೆ ಎನ್ನುವಂತೆ ಕಾಣುತ್ತಿದೆ. ಗ್ರಾಮೀಣರು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೂ ಗಮನಹರಿಸುವ ಅಗತ್ಯವಿದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಯಾರು ಏನಂತಾರೆ?

ಹೆಚ್ಚಿನ ಅನುದಾನಕ್ಕೆ ಪ್ರಸ್ತಾವ ಗೆಣಿಕೆಹಾಳುವಿನಿಂದ ಕ್ಯಾದಿಗೆಹಾಳುವರೆಗಿನ ರಸ್ತೆ ಮಧ್ಯದ ಹಳ್ಳದ ಸೇತುವೆ ಎತ್ತರಿಸಲು ₹2 ಕೋಟಿ ಅನುದಾನ ಮಂಜೂರಾಗಿತ್ತು. ಅನುದಾನ ಸಾಲದೆಂದು ₹3.80 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆಗವಿಯಪ್ಪ ಕೋಕೋಪಯೋಗಿ ಇಲಾಖೆ ಪ್ರಭಾರ ಎಇಇ ಕುರುಗೋಡು ಗ್ರಾಮೀಣ ರಸ್ತೆ ದುರಸ್ತಿಗೆ ಯೋಜನೆ ಕಂಪ್ಲಿ ಮತ್ತು ಕುರುಗೋಡು ಪಟ್ಟಣಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಬಹುತೇಕ ಪೂರ್ಣಗೊಂಡಿವೆ. ಕೆಲವು ಗ್ರಾಮಗಳಲ್ಲಿ ರಸ್ತೆ ನಿರ್ಮಾಣಗೊಂಡಿವೆ. ಮುಂದಿನ ದಿನಗಳಲ್ಲಿ ಉಳಿದ ರಸ್ತೆಗಳನ್ನು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು

-ಜೆ.ಎನ್.ಗಣೇಶ್ ಕುರುಗೋಡು ಶಾಸಕ

ಸಿರಿಗೇರಿ ರಸ್ತೆ ಸಂಪೂರ್ಣ ಹಾಳು ಕುರುಗೋಡಿನಿಂದ ಗೆಣಿಕೆಹಾಳು ಕ್ಯಾದಿಗೆಹಾಳು ಮಾರ್ಗವಾಗಿ ಸಿರಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ವೃದ್ಧರು ಗರ್ಭಣಿಯರು ಸಂಚರಿಸಲು ಈ ರಸ್ತೆ ಯೋಗ್ಯವೇ ಅಲ್ಲ.

-ಎಸ್.ಎಂ. ನಾಗರಾಜಸ್ವಾಮಿ ಸಿರಿಗೇರಿ ನಿವಾಸಿ

ಕುರುಗೋಡು ನಿತ್ಯ ಆತಂಕದಲ್ಲಿಯೇ ಸಂಚಾರ ಸಿದ್ದಮ್ಮನಹಳ್ಳಿಯಿಂದ ಸರ್ಕಾರಿ ಶಾಲೆ 3 ಕಿ.ಮೀ. ದೂರದಲ್ಲಿದೆ. ರಸ್ತೆ ಸರಿ ಇಲ್ಲದ ಕಾರಣ ಬಸ್ ಸಂಚರಿಸುತ್ತಿಲ್ಲ. ನಡೆದುಕೊಂಡು ಅಥವಾ ಸೈಕಲ್ನಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಟ್ರ್ಯಾಕ್ಟರ್ಗಳ ಓಡಾಟದಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಗಳ ನಡುವೆ ಸೈಕಲ್ನಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ.

-ಪರಶುರಾಮ ವಿದ್ಯಾರ್ಥಿ ಸಿದ್ದಮ್ಮನಹಳ್ಳಿ

ಕುರುಗೋಡು ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳಲಿ ಗೆಣಿಕೆಹಾಳು ಗ್ರಾಮದಿಂದ ಕ್ಯಾದಿಗೆಹಾಳು ಗ್ರಾಮದವರೆಗೆ ರಸ್ತೆ ಮತ್ತು ಸೇತುವೆಗಳು ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದೊಡ್ಡ ಅನಾಹುತ ಸಂಭವಿಸುವ ಮೊದಲು ಕ್ರಮ ಕೈಗೊಳ್ಳುವ ಅಗತ್ಯವಿದೆ

-ಎನ್.ಶೇಖರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಕ್ಯಾದಿಗೆಹಾಳು ಕುರುಗೋಡು ನಾಲ್ಕು ವರ್ಷಗಳಿಂದ ತಪ್ಪದ ಗೋಳು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಕುರಿತು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಗಿತ್ತು. ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆ ನಿರ್ಮಾಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ನಾಲ್ಕು ವರ್ಷ ಕಳೆದರೂ ರಸ್ತೆ ಸಮಸ್ಯೆ ಸರಿಹೋಗಿಲ್ಲ.

-ಎನ್.ರಾಮಾಂಜಿನಿ ಸಿದ್ದಮ್ಮನಹಳ್ಳಿ ಕುರುಗೋಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.