ಸಂಡೂರು: ತಾಲ್ಲೂಕಿನ ದರೋಜಿ ಗ್ರಾಮದ ಸ.ನಂ.735ರಲ್ಲಿ ವಿಸ್ತೀರ್ಣ ಒಟ್ಟು: 2298.75 ಎಕರೆಯ ಐತಿಹಾಸಿಕ ದರೋಜಿ ಕೆರೆ ಪ್ರದೇಶದಲ್ಲಿ 1480 ಎಕರೆ ಪ್ರದೇಶವನ್ನು ಬಳ್ಳಾರಿ ವಲಯದ ಅರಣ್ಯ ಪ್ರದೇಶವೆಂದು ಪಹಣಿ ಇಂಡಿಕರಣ ಮಾಡಿಕೊಡುವ ಬಗ್ಗೆ ದರೋಜಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಕಂದಾಯ ಇಲಾಖೆಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ದರೋಜಿ ಗ್ರಾಮದ ಸ.ನಂ.735ರಲ್ಲಿ ವಿಸ್ತೀರ್ಣ ಒಟ್ಟು: 2298.75 ಎಕರೆ ಪಹಣಿ, ಮೂಲ ದಾಖಲೆಗಳಲ್ಲಿ ಕೆರೆ ಎಂದು ನಮೂದು ಆಗಿದ್ದು, ಸ.ನಂ.735ರಲ್ಲಿನ ಕೆರೆಯ ಭೂಪ್ರದೇಶವು 1922ರಲ್ಲಿ ಮೀಸಲು ಅರಣ್ಯವೆಂದು ಅಧಿಸೂಚನೆಯಾಗಿದ್ದು, ಈ ಅಧಿಸೂಚನೆಯ ಆದೇಶದಂತೆ ಪಹಣಿಯಲ್ಲಿ 1480 ಎಕರೆಯ ವಿಸ್ತೀರ್ಣವನ್ನು ಅರಣ್ಯ ಎಂದು ಇಂಡಿಕರಣ ಮಾಡಲು ಬಳ್ಳಾರಿಯ ವಲಯ ಅರಣ್ಯಾಧಿಕಾರಿಗಳು ಸಂಡೂರಿನ ಕಂದಾಯ ಇಲಾಖೆಗೆ ಈಚೆಗೆ ಪತ್ರ ಬರೆದಿದ್ದಾರೆ.

ಅರಣ್ಯ ಪ್ರದೇಶ ಘೋಷಣೆಗೆ ಸ್ಥಳೀಯರ ವಿರೋಧ: ದರೋಜಿ ಕೆರೆಯು ಐತಿಹಾಸಿಕ ಹಿನ್ನೆಲೆ ಹೊಂದಿದ ಬ್ರಿಟಿಷರ ಕಾಲದ ಕೆರೆಯಾಗಿದೆ. ಕರ್ನಾಟಕದಲ್ಲೇ ಎರಡನೇ ಅತಿ ದೊಡ್ಡ ಕೆರೆಯಾಗಿದ್ದು, ಈ ಕೆರೆಯು ಹತ್ತಾರು ಹಳ್ಳಿ ಜನರ ಜೀವನಾಡಿಯಾಗಿದೆ. ದರೋಜಿ ಕರಡಿ ಧಾಮದಲ್ಲಿನ ವನ್ಯ ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ನೀರಿನ ದಾಹ ತಣಿಸುವ ಜಲಾಗಾರವಾಗಿದ್ದು, ಇಂತಹ ಕೆರೆಯ ಪ್ರದೇಶವನ್ನು ಬಳ್ಳಾರಿಯ ಮೀಸಲು ಅರಣ್ಯ ಪ್ರದೇಶವೆಂದು ಘೋಷಣೆ ಮಾಡಲು ಪಹಣಿಯಲ್ಲಿ ಅರಣ್ಯ ಎಂದು ಇಂಡಿಕರಣ ಮಾಡಲು ಹೊರಟಿರುವುದು ಸರಿಯಲ್ಲ.

103 ವರ್ಷಗಳ ಅಧಿಸೂಚನೆಯನ್ನು ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ದರೋಜಿ ಕೆರೆಯ ಪ್ರದೇಶದಲ್ಲಿ ಅರಣ್ಯ ಪ್ರದೇಶ ಎಂದು ಪಹಣಿ ಇಂಡೀಕರಣ ಮಾಡಬಾರದು ಎಂದು ದರೋಜಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಸಂಡೂರಿನ ತಹಶೀಲ್ದಾರ್, ಬಳ್ಳಾರಿಯ ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.