‘₹20 ಸಾವಿರ ಪ್ರೋತ್ಸಾಹ ಧನ’‘
ಚೆಂಡು ಹೂವಿನ ಬೆಳೆಯು ಸಣ್ಣ ರೈತರಿಗೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ತರುವ ಬೆಳೆಯಾಗಿದೆ. ತಾಲ್ಲೂಕಿನ ಬಹಳಷ್ಟು ರೈತರು ಚೆಂಡು ಹೂವಿನ ಬೆಳೆಯ ಮೊರೆ ಹೋಗಿದ್ದಾರೆ. ರೈತರಿಗೆ ಸಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದ್ದು ತೋಟಗಾರಿಕಾ ಇಲಾಖೆಯಿಂದ ಚೆಂಡು ಹೂವಿನ ಬೆಳೆಗೆ ಒಂದು ಹೆಕ್ಟೇರ್ ಜಮೀನಿಗೆ ₹20ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು’ ಎಂದು ಸಂಡೂರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹನುಮಪ್ಪನಾಯಕ ತಿಳಿಸಿದರು.