ಸಂಡೂರು: ತಾಲ್ಲೂಕಿನ ದಕ್ಷಿಣ ವಲಯದ ಸ್ವಾಮಿಮಲೈ ಬ್ಲಾಕ್ನ ಅರಣ್ಯ ಪ್ರದೇಶದ ಡಿ.ಎಂ.ಬಿ.ಶಾಖಾ ವ್ಯಾಪ್ತಿಯ ಭುಜಂಗನಗರ ಗ್ರಾಮದ ಬುಗರಿಕೊಳ್ಳದ ಬಳಿ ಗಂಧದ ಮರಗಳನ್ನು ಅಕ್ರಮವಾಗಿ ಕಡಿದು ಚಕ್ಕೆಗಳನ್ನಾಗಿ ಪರಿವರ್ತಿಸಿ ಸಾಗಣಿಕೆ ಮಾಡುತ್ತಿದ್ದ ಕಳ್ಳರ ಗುಂಪಿನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

4,900ಕೆ.ಜಿ.ತೂಕದ ಗಂಧದ ಚಕ್ಕೆಗಳನ್ನು, ಕೃತ್ಯಕ್ಕೆ ಬಳಸಲಾದ ಕೊಡಲಿ, ಇತರೆ ಆಯುಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸುಶೀಲಾನಗರ ಗ್ರಾಮದ ನಿವಾಸಿ ಆರೋಪಿ ಮಂಜುನಾಯ್ಕ್(40) ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನುಳಿದ ಮೂರು ಜನ ಆರೋಪಿಗಳು ದಾಳಿಯ ವೇಳೆ ತಪ್ಪಿಸಿಕೊಂಡಿದ್ದು, ಅವರ ಪತ್ತೆಗೆ ಸೂಕ್ತ ಕ್ರಮವಹಿಸಲಾಗಿದೆ ಎಂದು ದಕ್ಷಿಣ ವಲಯ ಅರಣ್ಯಾಧಿಕಾರಿ ಸೈಯದ್ ದಾದ ಖಲಂಧರ್ ತಿಳಿಸಿದ್ದಾರೆ.

ಉತ್ತರ ವಲಯದ ಅರಣ್ಯಾಧಿಕಾರಿ ಬಿ.ಮಂಜುನಾಥ, ಅರಣ್ಯ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.