ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ ಜಯಂತಿಗೆ ಏಳು ದಿನ ಕಾರ್ಯಕ್ರಮ

Last Updated 1 ಮೇ 2022, 11:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಶ್ರೀ ಶಂಕರ ಸೇವಾ ಪ್ರತಿಷ್ಠಾನವು ಶಂಕರ‌ ಜಯಂತಿ ಪ್ರಯುಕ್ತ ಏಳು ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ವೇಣುಗೋಪಾಲ ವೈದ್ಯ ತಿಳಿಸಿದರು.

ಮೇ 6ರಿಂದ 11ರ ವರೆಗೆ ಉದಯರಾಗ, ರುದ್ರಾಭಿಷೇಕ, ಪುಣ್ಯವಾಚನ, ಸ್ತೋತ್ರ ಪಾರಾಯಣ, ಶಂಕರವಿಜಯ ಪುರಾಣ ಪ್ರವಚನ, ಹೋಮ, ಹವನಗಳು ಜರುಗಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕಲಾವಿದ ರಾಯಚೂರು ಶೇಷಗಿರಿದಾಸ್ ಸಂಗೀತ ಕಾರ್ಯಕ್ರಮ, ಮಾತಾ ಪ್ರಮೋದಾಮಯಿ ಅವರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ಉಪನಯನ, ಮಕ್ಕಳಿಗೆ‌ ಅಕ್ಷರಾಭ್ಯಾಸ, ಸಂಸ್ಥೆಯ ಶತಮಾನೋತ್ಸವ ಸಂಭ್ರಮದಲ್ಲಿ ಹಲವು ಗಣ್ಯರ ಸನ್ಮಾನ ಸಮಾರಂಭ ಜರುಗಲಿದೆ ಎಂದು ವಿವರಿಸಿದರು.

ಮುಖಂಡರಾದ ಕೆ.ದಿವಾಕರ, ರಮೇಶ ಪುರೋಹಿತ್, ಎ.ಶೀನಂ ಭಟ್, ಕೆ.ಸಿ.ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT